ಸಂಗಮ,ತ್ರಿವೇಣಿ ಚಿತ್ರಮಂದಿರ ಆರಂಭ

ಕಲಬುರಗಿ ಜ 14: ನಗರದ ಸಿನಿಮಾ ಪ್ರಿಯರಿಗೊಂದು ಶುಭ ಸುದ್ದಿ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ ಸುಮಾರು 10 ತಿಂಗಳುಗಳಿಂದ ಬಂದ್ ಆಗಿದ್ದ ನಗರದ ಪ್ರಮುಖ ಚಿತ್ರ ಮಂದಿರಗಳಾದ ಸಂಗಮ ಮತ್ತು ತ್ರಿವೇಣಿ ಚಿತ್ರ ಮಂದಿರಗಳು ಇಂದಿನಿಂದ ಪ್ರದರ್ಶನ ಆರಂಭಿಸಲಿವೆ.
ಸರ್ಕಾರದ ಮಾರ್ಗಸೂಚಿ ಅನ್ವಯ ಚಿತ್ರ ಮಂದಿರದ ಆಸನಗಳ ಸಾಮಥ್ರ್ಯದ ಶೇ 40 ರಷ್ಟು ಜನರಿಗೆ ಮಾತ್ರ ಅವಕಾಶ ನೀಡಿ ಚಿತ್ರಮಂದಿರ ತೆರೆಯಲು ಜಿಲ್ಲಾಧಿಕಾರಿಗಳು ಪರವಾನಿಗೆ ನೀಡಿದ್ದಾರೆ.ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಚಿತ್ರಮಂದಿರದಲ್ಲಿ ಸಕಲ ಮುಂಜಾಗೂರಕತೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ದಿನಾಲು 3 ಶೋ:
ಸಂಗಮ ಮತ್ತು ತ್ರಿವೇಣಿ ಚಿಂತ್ರಮಂದಿರಗಳಲ್ಲಿ ದಿನಾಲು 3 ಪ್ರದರ್ಶನ(ಶೋ)ಗಳು ನಡೆಯಲಿವೆ. ಬೆಳಿಗ್ಗೆ 11.15 ಮಧ್ಯಾಹ್ನ 2.15 ಮತ್ತು ಸಂಜೆ 5.15 ಗಂಟೆಗೆ ಪ್ರದರ್ಶನ ನಡೆಯಲಿವೆ. ಸಂಗಮ ಚಿತ್ರಮಂದಿರದಲ್ಲಿ ಮಾಸ್ಟರ್ ಮತ್ತು ತ್ರಿವೇಣಿ ಚಿತ್ರಮಂದಿರದಲ್ಲಿ ಕ್ರ್ಯಾಕ್ ಸಿನಿಮಾಗಳು ಚಿತ್ರರಸಿಕರ ಮನ ತಣಿಸಲು ಕಾದಿವೆ.