ಸಂಗಪ್ಪ ತೌಡಿ ಮೀನಕೇರಾ ಅವರಿಗೆ ಡಾಕ್ಟರೇಟ್

ಬೀದರ:ಮಾ.2:” ಕನ್ನಡಕ್ಕೆ ಅನುವಾದಗೊಂಡ ಮರಾಠಿ ನಾಟಕಗಳ ಸಾಮಾಜಿಕ ಆಯಾಮಗಳು ” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ಸಂಗಪ್ಪ ತೌಡಿ ಮೀನಕೇರಾ ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿದೆ.ಪೆÇ್ರ. ವಿಕ್ರಮ ವಿಸಾಜಿ ಅವರ ಮಾರ್ಗದರ್ಶನದಲ್ಲಿ ಮುಗಿಸಿದ್ದಾರೆ. ಸಂಗಪ್ಪ ತೌಡಿ ಅವರು ಪಿ ಎಚ್.ಡಿ ಪದವಿ ಪಡೆಯಲು ಅಮ್ಮನ ಸ್ಪೂರ್ತಿಯ ಮಾತುಗಳೇ ಕಾರಣವಾಯಿತು ಎಂದು ತಿಳಿಸಿದರು. ಮಗ ಪಿ ಎಚ್. ಡಿ ಪದವಿ ಪಡೆದ ಕಾರಣಕ್ಕಾಗಿ ತಂದೆ ಚಂದ್ರಪ್ಪ ತೌಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಾಧ್ಯಾಪಕರು ಕನ್ನಡ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪೆÇ್ರ. ಬಸವರಾಜ ಕೋಡಂಬಲ, ಎಚ್ ಎಸ್ ಪಾಟೀಲ, ಡಿ. ಬಿ ಕಂಬಾರ , ಡಾ.ಶಶೀಧರ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.