ಸಂಗಪ್ಪ ತೌಡಿ ಅವರಿಗೆ ಪಿಎಚ್.ಡಿ.

ಬೀದರ್:ಫೆ.26: ಪ್ರಾಧ್ಯಾಪಕ ಸಂಗಪ್ಪ ತೌಡಿ ಅವರು “ಕನ್ನಡಕ್ಕೆ ಅನುವಾದಗೊಂಡ ಮರಾಠಿ ನಾಟಕಗಳ ಸಾಮಾಜಿಕ ಆಯಾಮಗಳು” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವದಲ್ಲಿ ಗೌರವಾನ್ವಿತ ಬಿ.ಎಸ್.ಪಾಟೀಲ್ ಲೋಕಾಯುಕ್ತರು ಕರ್ನಾಟಕ ರಾಜ್ಯ ಇವರು ಪಿಎಚ್.ಡಿ ಪದವಿ ಪ್ರಮಾಣ ಪತ್ರವನ್ನು ನೀಡಿದರು. ಪೆÇ್ರ. ವಿಕ್ರಮ ವಿಸಾಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧವನ್ನು ಡಾ. ಸಂಗಪ್ಪ ತೌಡಿ ಸಿದ್ದಪಡಿಸಿದ್ದಾರೆ. ತೌಡಿಯವರು ಸದ್ಯ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.