ಸಂಗನಬಸವ ಶಿಶು ನಿಕೇತನ್ ಶಾಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಣೆ

ವಿಜಯಪುರ, ಜ.15-ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಇಂದು ದೇಶದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲ್ಪಡುವ ಸುಗ್ಗಿ ಕಾಲವನ್ನು ಪ್ರದರ್ಶಿಸುವ ಮೂಲಕ ಮಕ್ಕಳಿಂದ ನೃತ್ಯಮಾಡುವುದರ ಮೂಲಕ ಶಾಲೆಯಲ್ಲಿ ಆಚರಿಸಲಾಯಿತು.
ಅಸ್ಸಾಂನಲ್ಲಿ-ಬಿಹು, ತಮಿಳುನಾಡಿನಲ್ಲಿ- ಪೊಂಗಲ್ ಹರ್ಯಾಣ ಮತ್ತು ಪಂಜಾಬಿನಲ್ಲಿ -ಬೈಸಾಕಿ, ನಾಗಲ್ಯಾಂಡ್ ನಲ್ಲಿ-ಹಾರ್ನ್ ಬಿಲ್, ಕರ್ನಾಟಕದಲ್ಲಿ-ಮಕರ ಸಂಕ್ರಮಣ, ಆಯಾ ರಾಜ್ಯದ ಉಡುಪುಗಳನ್ನು ಧರಿಸಿ ಮಕ್ಕಳು ನೃತ್ಯ ಮಾಡುವುದರ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ್, ನಾಮಿನಿ ಚೇರ್ಮನ್ ಎಸ್, ಹೆಚ್ ನಾಡಗೌಡ, ಆಡಳಿತಾಧಿಕಾರಿ ಡಾ, ಎಚ್,ವೆಂಕಟೇಶ್ ಪ್ರಾಂಶುಪಾಲರು, ವಿಜಯಲಕ್ಷ್ಮಿ ಪಟೇದ, ಹಾಗೂ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರಾದ ಶೈಲಜಾ, ಕವಿತಾ, ಲಕ್ಷ್ಮಿ, ತೇಜಸ್ವಿನಿ, ರೇಣುಕಾ, ವಂದನ, ಅರುಂಧತಿ, ರಾಧಿಕಾ, ಶಿತಲ್, ಕರುಣಾ, ಸುನಿತಾ, ಮಂಜುನಾಥ್, ಚನ್ನಬಸು, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.