ಸಂಗನಕಲ್ ಪ್ರಾಕ್ತನ ವಸ್ತುಸಂಗ್ರಹಲಯಕ್ಕೆರಾಷ್ಟ್ರೀಯ  ಸ್ಮಾರಕಗಳ ಪ್ರಾಧಿಕಾರದ ಅಧ್ಯಕ್ಷರ ಭೇಟಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಜೂಲೈ ೯: ಕಿಶೋರ್ ಬಸಾ, ಡೈರೆಕ್ಟರ್ ಜನರಲ್ ಭಾರತದ  ಪ್ರಾಚ್ಯಾವಸ್ತು ಸರ್ವೇಕ್ಷಣ ಇಲಾಖೆ ದೆಹಲಿ ಹಾಗೂ  ಅಧ್ಯಕ್ಷರೂ ರಾಷ್ಟ್ರೀಯ  ಸ್ಮಾರಕಗಳ ಪ್ರಾಧಿಕಾರ, ಶನಿವಾರ ಸಂಜೆ ರಾಬರ್ಟ್ ಬ್ರೂಸ್ಫುಟ್ ಸಂಗನಕಲ್ ಪ್ರಾಕ್ತನ ವಸ್ತುಸಂಗ್ರಹಲಯಕ್ಕೆ ಇಂದು
ಭೇಟಿ ನೀಡಿದರು.
“ಭಾರತದ ಯಾವುದೇ ಜಿಲ್ಲೆಯಲ್ಲಿ ಕಾಣಸಿಗದ ವಸ್ತುಸಂಗ್ರಹಲಯ ಬಳ್ಳಾರಿ ಜಿಲ್ಲೆಯಲ್ಲಿ ಸ್ಥಾಪಿಸಿದ್ದು ಒಂದು  ಹೆಮ್ಮೆಯ ವಿಷಯ” ಎಂದು ತಿಳಿಸಿದರು.
ಬಳ್ಳಾರಿಯ  ವಸ್ತುಸಂಗ್ರಹಲಯಕ್ಕೆ ಭೇಟಿ ನೀಡಿರುವುದು ನನಗೆ ಬಹಳ  ಸಂತೋಷವಾಗಿದೆ. ಇಲ್ಲಿ ಪ್ರಾಗೈತಿಹಾಸದ ಪಿತಾಮಹ   ರಾಬರ್ಟ್ ಬ್ರೂಸ್ ಫುಟ್  ಅವರಿಗೆ ಗೌರವ ಸಲ್ಲಿಸುವುದಲ್ಲದೆ ಮಾನವನ ಉಗಮ ಮತ್ತು ಅವನ  ವಿಕಾಸನದ ಬಗ್ಗೆ ಸರಿಯಾದ ಕ್ರಮದಲ್ಲಿ ಮಾಹಿತಿಯನ್ನು ವಿವರಿಸಲಾಗಿದೆ. ಇದಲ್ಲದೆ ಮಾನವನು ವಾತಾವರಣ ಹಾಗೂ ಸಾಂಸ್ಕೃತಿಕ ಬದ್ಲಾವನೆಗಳಿಗೆ ಹೊಂದಿಕೊಂಡ ಬಗ್ಗೆ ವಿವರಿಸಲಾಗಿದೆ, ಎಂದು  ತಿಳಿಸಿದರು.
ನಮ್ಮ ಪರಂಪರೆಯನ್ನು ಗೌರವಿಸಿ ಕಾಪಾಡಿಕೊಂಡು ಹೋಗಬೇಕೆಂದು ಹಿರಿಯರು  ಹಾಗೂ ಕಿರಿಯರನ್ನು ಪ್ರೋತ್ಸಾಹಿಸುವ ಈ ವಸ್ತುಸಂಗ್ರಹಲಯ ಬ್ರಹದ್ದಾಗಿ ಬೆಳೆಯಲಿ ಎಂದು ಹಾರೈಸುತ್ತ ಇದನ್ನು ಸ್ಥಾಪಿಸಲು ಮುಂದಾಳತ್ವ ವಹಿಸಿದ ಪ್ರೊ ರವಿ ಕೊರಿಶೆಟ್ಟರ್ ಹಾಗೂ ಅವರ ತಂಡಕ್ಕೆ ಮತ್ತು ಎಲ್ಲಾ ರೀತಿಯ ಸಹಕಾರ ನೀಡಿದ  ಜಿಲ್ಲಾ ಆಡಳಿತಕ್ಕೆ  ಅಭಿನಂದಿಸಿದರು.
ಹಂಪಿ  ವೃತ್ತದ ಸುಪರಿಂಟೆಂಡಿಂಗ್ ಅರಕ್ಯೋಲಜಿಸ್ಟ್ ನಿಖಿಲ್ ದಾಸ್ ಹಾಗೂ ಭುವನೇಶ್ವರದಿಂದ ಬಂದಿದ್ದ ಇನ್ನೊಬ್ಬ ಹಿರಿಯ ಅಧಿಕಾರಿ  ಸುಶಾಂತ್ ಕರ್, ವಸ್ತುಸಂಗ್ರಹಲಯದ ಸಮಿತಿ ಸದಸ್ಯರುಗಳಾದ ಸಂತೋಷ್ ಮಾರ್ಟಿನ್, ಎಂ ಅಹಿರಾಜ್ ಉಪಸ್ಥಿತರಿದ್ದರು.