ಸಂಗನಕಲ್ ನಲ್ಲಿ  ಬುದ್ಧ ಜಯಂತಿ ಆಚರಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ,24- ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಬುದ್ಧ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳಾದ ವೆಂಕಟಗಿರಿ ದಳವಾಯಿರವರು ಬುದ್ಧ ಧರ್ಮವನ್ನು ಬೋಧಿಸಲಿಲ್ಲ ಧಮ್ಮವನ್ನು ಬೋಧಿಸಿದ. ಹಾಗೂ ಬುದ್ಧ ಅನತ್ಮಾದ   ಬಗ್ಗೆ, ಹಾಗು  ದೇವರು, ಸ್ವರ್ಗ, ನರಕ, ಕರ್ಮದ ವಿಚಾರ ಧಾರೆಗಳನ್ನು ಭೋಧಿಸದೆ, ವೈಚಾರಿಕತೆಯನ್ನು ಜನರಲ್ಲಿ ತುಂಬಿದರು. ಗೌತಮ ಬುದ್ಧರು, ವೈಜ್ಞಾನಿಕ ನೆಲೆಗಟ್ಟಲ್ಲಿ ವಿಚಾರಗಳನ್ನು ಹೇಳಿದರು. ಮತ್ತು ನನನ್ನೂ ಮತ್ತು ನನ್ನ ವಿಚಾರಗಳನ್ನು ಶೋಧಿಸಿ ಸತ್ಯ ಎನಿಸಿದರೆ ಸ್ವೀಕರಿಸಿ ಎಂದು ಹೇಳಿದರು. ನಾನು ಯಾವುದೇ ಪ್ರವಾದಿ,ಸಂತನಲ್ಲ, ನಾನು ಮನುಷ್ಯ ಮಾತ್ರ ಎಂದು ಗೌತಮ ಬುದ್ಧರು ಹೇಳಿದರು. ನಾನು ವಿಶೇಷ ವಿಚಾರಗಳನ್ನು ಹೇಳಲು ಬಂದಿರುವ ಒಬ್ಬ ಸಾಮಾನ್ಯ ಮನುಷ್ಯ ಎಂದು ಗೌತಮ ಬುದ್ಧರು ಹೇಳಿಕೊಳ್ಳುತ್ತಿದ್ದರು. ಎಂದೂ ಗೌತಮ ಬುದ್ಧರ ಬಗ್ಗೆ ವೆಂಕಟಗಿರಿ ದಳವಾಯಿರವರು ಹೇಳಿದರು.
ಲೇಖಕರು, ಸಮಾಜ ಚಿಂತಕರಾದ *ವೆಂಕಟಯ್ಯ ಅಪ್ಪೆಗೆರೆ ರವರು ಮಾತನಾಡಿ ನಮ್ಮ ಬಳ್ಳಾರಿ ಸಂಗನಕಲ್ಲು ಗ್ರಾಮದಲ್ಲಿ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಿ, ಬುದ್ಧನ ವಿಚಾರಗಳನ್ನು ಹಾಗೂ ತತ್ವಗಳನ್ನು ಈ ಭಾಗದಲ್ಲಿ ಪ್ರಚಾರ ಪಡಿಸಲು ಇಂತಹ ಕೆಲಸಗಳು ಅವಶ್ಯಕತೆ ಇದೆ ಎಂದು ಹೇಳಿದರು.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಅಂಚೆ ಕಚೇರಿ ಸೂಪರಿಡೆಂನಡೆಂಟ್ ಚತಸ್ಕೋಟಿರವರು ಮಾತನಾಡಿ”ಈ ದಿನ ಬೌದ್ಧ ಪೂರ್ಣಿಮಾ ಕಾರ್ಯಕ್ರಮ ಅಂಗವಾಗಿ ನಾನು ಗುಲ್ಬರ್ಗ ಕಡೆ ಹೋಗಬೇಕು ಎಂದು ಆಲೋಚನೆಯನ್ನು ಮಾಡಿಕೊಂಡಿದ್ದೆ, ಅಂಚೆ ಕಚೇರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರ ಸಂಘದ ಅಧ್ಯಕ್ಷರ ಅವರನ್ನು ವಿಚಾರಿಸಿ ಈ ದಿನ ನಮ್ಮ ಜಿಲ್ಲೆಯಲ್ಲಿ ಬೌದ್ಧ ಜಯಂತಿ ಕಾರ್ಯಕ್ರಮ ಎನಾದರೂ ಇದೇಯೇ ? ಎಂದು ವಿಚಾರಿಸಿದೆ. ಸಂಗನಕಲ್ಲು ಗ್ರಾಮದಲ್ಲಿ ಕಾರ್ಯಕ್ರಮ ಇದೆ ಎಂದು ತಿಳಿಸಿದರು, ನಾನು ಇಲ್ಲಿಗೆ ಬಂದು ನೋಡಿದ ಮೇಲೆ ನನಗೆ ತುಂಬಾ ಸಂತೋಷವಾಯಿತು, ಏಕೆಂದರೆ ನಮ್ಮ ಭಾಗದಲ್ಲಿ ಅದು ಪುರಾತನ ಇತಿಹಾಸವುಳ್ಳ ಪ್ರದೇಶದಲ್ಲಿ ಈ ಕಾರ್ಯಕ್ರಮ ಜರುಗುವುದು ತುಂಬಾ ವಿಶೇಷ ಎಂದರು, ನಾವು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮತ್ತು ಭಾಷಣ ಮಾಡುವುದು ವಿಷಯಗಳನ್ನು ಹೇಳುವುದು ಮುಖ್ಯವಲ್ಲ ಎಂದರು, ಅಂತಹ ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಇಲ್ಲದಿದ್ದರೆ ಸಮಾಜವನ್ನು ಅಥವಾ ಮೌಡ್ಯ ಕಂದಾಚಾರ ವಾಮಾಚಾರ ಅದರಿಂದ ಹೊರಬರುವುದು ಆಗುವುದಿಲ್ಲ, ಅದಕ್ಕಾಗಿ ನಾವು ಗೌತಮ ಬುದ್ಧರ ವಿಚಾರ ತತ್ವ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಅದರ ಸಾರ್ಥಕತೆ ಸಾಧ್ಯವಾಗುತ್ತದೆ, ಎಂದು ಹೇಳಿದರು.
ಕಂಪ್ಲಿಯ ಬೌದ್ಧ ಸಮಾಜ ಮುಖಂಡರು ರಮೇಶ್ ರವರು ಮಾತನಾಡಿ*, ಪುರಾತನ ನೆಲೆಗಟ್ಟಾದ ಈ ಪ್ರದೇಶದಲ್ಲಿ ನಮ್ಮ ಪುರಾತನ ವಿಚಾರ ತತ್ವ ಸಿದ್ಧಾಂತ ಧರ್ಮವನ್ನು ಈ ಭಾಗದಲ್ಲಿ ಹೊರಹೊಮ್ಮುತ್ತಿರುವುದು ತುಂಬಾ ಹೆಮ್ಮೆಯ ವಿಚಾರ, ಬುದ್ಧನೆಂದರೆ ಶಾಂತಿ, ನಮ್ಮ ಜಿಲ್ಲೆಯ ಇಂತಹ ಕೆಲಸಗಳು ಎಲ್ಲಾ ಕಡೆ ಪ್ರೇರೇಪಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.
ಸನ್ಮಾನ ಸಮಾರಂಭ:* ಸಂಗನಕಲ್ ವಿಜಯಕುಮಾರ್ ಮತ್ತು ಕಪ್ಪಗಲ್ ಓಂಕಾರಪ್ಪರವರಿಗೆ ಕಂಪ್ಲಿಯ ಬೌದ್ಧ ಸಮಾಜ ವೃಂದದವರಿಂದ ಸನ್ಮಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ:* ಮಾನವ ಬಂಧುತ್ವ ವೇದಿಕೆ ಸಂಚಾಲಕರು ವಿಜಯಕುಮಾರ್ ಸಂಗನಕಲ್, ಕಪ್ಪಗಲ್ ಓಂಕಾರಪ್ಪ, ಎರ್ರೆಣ್ಣ, ಲೇಖಕರು ಎನ್.ಡಿ.ವೆಂಕಮ್ಮ, ಪಿ ಜಗನ್ನಾಥ್, ಬಿ. ಶ್ರೀನಿವಾಸ ಮೂರ್ತಿ, ಗಂಗಾಧರ, ಸಿರವಾರ ಗಾದಿಲಿಂಗ ಗ್ರಾಮ ಪಂಚಾಯತಿ ಸದಸ್ಯರು. ಸಿರವಾರ ಮಾಜಿ ಅಧ್ಯಕ್ಷರು ಶೇಖ, ಸಂಗನಕಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಪ್ರಮೀಳಾ ವೀರೇಶ್, ಪಿ.ರಂಜಾನ್ ಬಾಷಾ ಗ್ರಾಮ ಪಂಚಾಯತಿ ಸದಸ್ಯರು ಸಂಗನಕಲ್, ಜೋಗಿನಾ ವಿಜಯಕುಮಾರ್, ಶ್ರೀಮತಿ ಪುಷ್ಪ ಚಂದ್ರಶೇಖರ್, ಬೈಲೂರು ಲಿಂಗಪ್ಪ, ಶಂಕರ್, ಕಂಪ್ಲಿಯ ಬೌದ್ಧ ಸಮಾಜದ ಮುಖಂಡರು ಪದಾಧಿಕಾರಿಗಳು, ಹುಸೇನಪ್ಪ, ಶ್ರೀಧರ್, ಮಲೆಯಪ್ಪ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾದ ಭಂಡಾರಿ, ಭೀಮ್ ಆರ್ಮಿ ಸಂಘಟನೆ ಮುಖ್ಯಸ್ಥರು ರಘು, ಕೆಎಂಎಫ್ ನಿರ್ದೇಶಕರಾದ ಧನಂಜಯ ಹಮಾಲ್, ಸಂಗನಕಲ್ಲು ತಿಪ್ಪೇಸ್ವಾಮಿ, ಲಿಂಗದೇವನಹಳ್ಳಿ ಪಾಂಡುರಂಗ, ಇದ್ದರು.