
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.16: ಸಮೃದ್ಧಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಯಿಂದ ತಾಲೂಕಿನಸಂಗನಕಲ್ಲು ಗ್ರಾಮದ ಶ್ರೀ ಬಸವೇಶ್ವರ ಪ್ರೌಢ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಪೆನ್ ವಿತರಣೆ ಮಾಡಲಾಯ್ತು.
ಶಾಲೆಯ ಮುಖ್ಯ ಗುರುಗಳಾದ ಶ್ರೀ ವೆಂಕಟೇಶ್ ಈ ಸಂದರ್ಭದಲ್ಲಿ ಮಾತನಾಡಿ, ಬಡಮಕ್ಕಳು ಓದುತ್ತಿರುವ ನಮ್ಮ ಶಾಲೆಗೆ ಸಮೃದ್ಧಿ ಸಂಸ್ಥೆಯವರು ಬಂದು ನೋಟ್ ಪುಸ್ತಕ ಮತ್ತು ಪೆನ್ ನೀಡುತ್ತಿರುವುದು ಹೆಮ್ಮೆಯ ವಿಷಯ. ಇದು ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ಮುಂಡ್ರಿಗಿ, ಉಪಾಧ್ಯಕ್ಷರಾದ ಶ್ರೀನಿವಾಸ್ ಎಸ್, ಹುಲಗೇಶ್, ಖಜಾಂಚಿ ಶ್ರೀನಿವಾಸ್ ಜವೆದಾರ್, ಸದಸ್ಯರಾದ ವಿಜಯ್ ಕುಮಾರ್, ಹೊನ್ನೂರಸ್ವಾಮಿ, ಪ್ರಹ್ಲಾದ್ ತೆಗ್ಗಿನಬೂದಿಹಾಳ್, ಪ್ರಸನ್ನ ಹಾಗೂ ಸಹಶಿಕ್ಷಕರಾದ ಪಾಪಯ್ಯ, ಫಕ್ರುದ್ದೀನ್, ರಾಧಿಕಾ, ಸುಧಾ, ಹುಲುಗಪ್ಪ ಮುಂತಾದವರಿದ್ದರು.