
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಬ್ರಾಹಿಂಪುರ್ ದ ವಿಶ್ವಮಾನವ ಕಲಾ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಯುಗಾದಿ ಹಬ್ಬದ ಜಾನಪದ ಉತ್ಸವ, ಅಪ್ಪು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಮತ್ತು ನಾಟಕ ಪ್ರದರ್ಶನವಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರುದ್ರಮ್ಮ ಸಣ್ಣ ಭೀಮಪ್ಪ ನೆರವೇರಿಸಿದರು. ಗ್ರಾಮ ಪಂಚಾಯತಿಯ ಸದಸ್ಯರಾದ ಗಂಗಾಧರ್, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘದ ನಿವೃತ್ತ ಬ್ಯಾಂಕ್ ನೌಕರರ ಪ್ರಸಾದ, ಶ್ರೀನಿವಾಸ್ ನಾಗರಾಜ್ ಈರಣ್ಣ ದಿವಾಕರ್ ,ಹೇಮಂತ್, ಕೆ ಜಡಪ್ಪ ,ವೆಂಕಟೇಶ, ಎರ್ರಿಸ್ವಾಮಿ, ಎರಿಯಮ್ಮ ಅಂಜಿನಪ್ಪ ,ಪ್ರಮೀಳಾ ವೀರೇಶ ,ಸುಂಕಮ್ಮ ಬಸವರಾಜ ,ವಿಜಯಕುಮಾರ್ ಬಸವರಾಜ ,ಹನುಮಂತಪ್ಪ ನಾಗರಾಜ ಭಾಗವಹಿಸಿದರು ಸಾಂಸ್ಕೃತಿ ಕಾರ್ಯಕ್ರಮಗಳಾದ ಸುಗಮ ಸಂಗೀತ ಸುಂಕಪ್ಪ ಎರಗುಡಿ ರವರಿಂದ ಸಂಗೀತ ಕಾರ್ಯಕ್ರಮ ಹುಲುಗಪ್ಪ ಎಸ್ ಎಂ ಬಳ್ಳಾರಿ ಇವರಿಂದ ನಾಟಕ ಶಾಲೆಯಿಂದ ವಂಚಿತ ಮಗು ಎಂಬ ಸುಂದರ ನಾಟಕ ಪ್ರದರ್ಶನ ನೀಡಿದರು ಕಾರ್ಯಕ್ರಮದಲ್ಲಿ ಕಲಾವಿದರಾದ ಬಿ ಆನಂದ ಹೇಮಂತ್ ರಾಜು ಮಹೇಶ್ ಕೋಳಿ ಅಶ್ವಿನಿ ಕೊಟ್ರೇಶ ಧನಂಜಯ್ ಹುಲಗಪ್ಪ ವೀರೇಶ್ ದಳವಾಯಿ ಇದ್ದರು ಪ್ರಾರ್ಥನೆ ಕೆ ಜಡಪ್ಪ ಮಾಡಿದರು ಯರಿಸ್ವಾಮಿ ವಂದನಾರ್ಪಣೆ ಮಾಡಿದರು.