ಸಂಗನಕಲ್ಲಿನಲ್ಲಿ ಭಗೀರಥ ಜಯಂತಿ ಆಚರಣೆ

ಬಳ್ಳಾರಿ, ಮೇ.18: ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಇಂದು ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಉಪ್ಪಾರ ಸಮಾಜದ ಮುಖಂಡ ಕೃಷ್ಣ ಮೂರ್ತಿ ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಮ ಮಾಲೆ ಅರ್ಪಿಸಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ವಿನಯ್, ಸಿದ್ದೇಶ್, ಹನುಮೇಸ್, ಶ್ರೀರಾಮುಲು, ನಾಗೇಂದ್ರ ಮೊದಲಾದವರು ಇದ್ದರು.