ಸಂಖ್ಯಾ ಶಾಸ್ತ್ರದ ಪಿತಾಮಹ ಭಾಸ್ಕರಾಚಾರ್ಯರು : ಡಾ ಆನಂದ ಕುಲಕರ್ಣಿ

ವಿಜಯಪುರ :ಜು.17: ಭಾಸ್ಕರಾಚಾರ್ಯರು ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದಲ್ಲಿ ಜನಸಿ ಜಗತ್ತಿಗೆ ಕೊಡುಗೆ ನೀಡಿದ ಮಹಾನ ಚೇತನ, ಅಂಕಿಅಂಶಗಳ ಜೀವಾಳವೇ ಶೂನ್ಯದಿಂದ, ಇದರ ಕೊಡುಗೆ ನೀಡುವದರ ಮೂಲಕ ಸಂಖ್ಯಾಶಾಸ್ತ್ರದ ಪಿತಾಮಹರಾದರು ಎಂದರು.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಮತ್ತು ನಗರ ಘಟಕ ವತಿಯಿಂದ ಹಮ್ಮಿಕೊಂಡ ಡಿ ಎಸ್ ಗುಡ್ಡೋಡಗಿ ಅವರ ದತ್ತಿ ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದರು.
ಇನ್ನೊಬ್ಬ ಉಪನ್ಯಾಸಕರಾದ ಸಂತೋಷ ಬಂಡೆ ಸಾಹಿತಿಗಳು ಮಾತನಾಡಿ ಇಂದು ವಚನಗಳು ಬಾಯಿಮಾತಿನ ರುಚಿಗಾಗಿ ಮಾತನಾಡುವದು ಬೆಳೆದು ಬರುತ್ತಿದೆ ಇದು ಒಳ್ಳೆಯ ಬೆಳವಣಿಗೆ ಅಲ್ಲ, ಹನ್ನೆರಡನೇ ಶತಮಾನದ ಶರಣರು ಸರ್ವಕಾಲಿಕ ರತ್ನಗಳು ಅವರ ನಡೆನುಡು ಅನುಕರಣೀಯ ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಅಕ್ಕಮ್ಮ ನೀಲಾಂಬಿಕೆ ಮುಂತಾದ ವಚನಕಾರರು ಇಂದಿಗೂ ಆದರ್ಶ ಪ್ರಾಯರಾಗಿದ್ದಾರೆ ಎಂದರು. ಸಾನಿಧ್ಯವಹಿಸಿದ ವೇದಮೂರ್ತಿ ಚಿದಾನಂದ ಹಿರೇಮಠ ಅವರು ಮಾತನಾಡಿ ಎಲ್ಲದಕ್ಕೂ ಲೆಕ್ಕ ಬೇಕು, ಲೆಕ್ಕ ಬದುಕನ್ನು ಹಸನುಗೊಳಿಸುತ್ತದೆ, ಶರಣರು ನುಡಿದಂತೆ ನಡೆದರು ಹಿರಿಯರು ಕಂಡುಹಿಡಿದ ಸತ್ಯದ ಪುನರ್ ಅನ್ವೇಷಣೆ ಆಗಬೇಕಿದೆ, ಜೀವನಕ್ಕೂ ಗಣಿತಕ್ಕೂ ಸಂಬಂಧವಿದೆ, ಜೀವನದಲ್ಲಿ ಲೆಕ್ಕತಪ್ಪಬಾರದು ಎಂದರು.
ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಡಾ ಮಮತಾ ಬನ್ನೂರ,ಅರ್ಜುನ ಶಿರೂರ,ಸ್ಮೀತಾ ಇಂಡಿಕರ್, ನೀಲಗಂಗಾ ಅಣ್ಣೆಪ್ಪನವರ ಮಾತನಾಡಿದರು. ಕಾರ್ಯದಲ್ಲಿ ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಸಂಗಮೇಶ ಗುಡ್ಡೋಡಗಿ ಅವರು ದತ್ತಿ ಉಪನ್ಯಾಸಗಳ ಮೂಲಕ ಸಾಹಿತ್ಯ ಕ್ಷೇತ್ರದ ಕೊಡುಗೆ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕøತರಾದ ಡಾ ಜಿ ಡಿ ಕೊಟ್ಟಾಳ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮನ್ಯರ ಪರಿಷತ್ತು ಆಗುತ್ತಿದೆ, ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತೀರುವದು ಶ್ಲ್ಯಾಘನೀಯ ಎಂದರು. ದತ್ತಿ ವಿಷಯಗಳಿಗೆ ಪ್ರತಿಭಾವಂತರನ್ನು ಗೋಷ್ಠಿಗಳಿಗೆ ಪರಿಚಯಿಸುತ್ತಿರುವದು ಸ್ತುತ್ಯಾರ್ಯ ಎಂದರು,
ನಾಟಕ ಅಕಾಡಮಿ ಮಾಜಿ ಅಧ್ಯಕ್ಷ ಎಲ್ ಬಿ ಶೇಖ ಅವರು ರಂಗ ಗೀತೆಗಳೊಂದಿಗೆ ಪ್ರಾರಂಭವಾಯಿತು. ಬಾಲ ಪ್ರತಿಭೆಗಳಾದ ಸನ್ನಧಿ ಕಲ್ಯಾಣಪ್ಪಗೋಳ, ರೋಹನ್ ಕೊಟ್ನಾಳ ವಚನ ಸಾದರಪಡಿಸಿದರು, ಕಸಾಪ ಗೌರವ ಕೋಶಾಧ್ಯಕ್ಷರಾದ ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊಡುಗೈ ದಾನಿಗಳಾದ ಡಿ ಎಸ್ ಗುಡ್ಡೋಡಗಿಯವರ ಸಮಾಜ ಸೇವೆ ಶ್ಲ್ಯಾಘನೀಯ ಎಂದರು.
ಕವಿತಾ ಕಲ್ಯಾಣಪ್ಪಗೋಳ ಸ್ವಾಗತಿಸಿ ನಿರೂಪಿಸಿದರು. ಶೋಭಾ ಮೆಡೆದಾರ ವಂದಿಸಿದರು ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ , ಜಿಲ್ಲಾ ದತ್ತಿ ಸಂಚಾಲಕರಾದ ರಾಜೇಸಾಬ ಶಿವನಗುತ್ತಿ, ಉಪಸ್ಥಿತಿತರದ್ದರು ಮುಖ್ಯ ಅತಿಥಿಗಳಾಗಿ ಡಾ ಮಮತಾ ಬನ್ನೂರ,ಅರ್ಜುನ ಶಿರೂರ,ಸ್ಮೀತಾ ಇಂಡಿಕರ್ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಕಮಲಾ ಮುರಾಳ, ಸುಖದೇವಿ ಅಲಬಾಳಮಠ,ಸಿದ್ರಾಮಯ್ಯ ಲಕ್ಕುಂಡಿಮಠ,ಅನ್ನಪೂರ್ಣ ಬೆಳ್ಳಣ್ಣವರ,ಎ ಡಿ ಮುಲ್ಲಾ,ಅಲ್ಲಪ್ರಭು ಮಲ್ಲಿಕಾರ್ಜುನಮಠ,ಪ್ರದೀಪ್ ಕುಲಕರ್ಣಿ,ಲಕ್ಷ್ಮಿ ಎಸ್ ತೊರವಿ,ಅಹ್ಮದ ವಾಲೀಕಾರ, ಗೀತಾ ಕುಲಕರ್ಣಿ,ಮಹಾದೇವಿ ತೆಲಗಿ,ಶಾಂತಾ ವಿಭೂತಿ, ಪೂಜ್ಯ ಬಡಿಗೇರ,ಭುವನೇಶ್ವರಿ ಹಿರೇಮಠ,ಎಸ್ ಎಂ ಭಾಟಿ,ಸಲೀಮ್ ಬಾಗವಾನ,ಮೈಬೂಬ ಕೋಲಾರ,ಶ್ರೀಧರ ಹೆಗಡೆ, ತೇಜಸ್ವಿನಿ ವಾಂಗಿ,ತ್ರಿವೇಣಿ ಬುರ್ಲಿ,ಪ್ರದೀಪ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.