ಸಂಕ್ರಾಂತಿ ಹಬ್ಬದ ತಯಾರಿ: ಖರೀದಿ ಭರ್ಜರಿ

ಕಲಬುರಗಿ,ಜ.14: ಸುಗ್ಗಿ ಹಬ್ಬ ಎಂದೇ ಕರೆಯಲಾಗುವ ಮಕರ ಸಂಕ್ರಾತಿ ಹಬ್ಬದ ಸಲುವಾಗಿ ನಗರದ ಸುಪರ್ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅಗತ್ಯವಿರುವ ಸಾಮಗ್ರಿಗಳ ಖರೀದಿ ಭರ್ಜರಿಯಾಗಿ ನಡೆಯಿತು.
ಮಕರ ಸಂಕ್ರಮಣದ ಮುನ್ನಾ ದಿನವಾದ ಇಂದು ಸಂಕ್ರಮಣ ಭೋಗಿ ಹಬ್ಬ. ಮಹಿಳೆಯರು ಪರಸ್ಪರ ಮೊರದಲ್ಲಿ ಬಾಗಿಣ ಕೊಡುವ ಸಂಪ್ರದಾಯವಿದೆ.
ಈ ಹಿನ್ನೆಲೆಯಲ್ಲಿ ಬಾಗಿಣ ನೀಡುವದಕ್ಕೆ ಬೇಕಾಗುವ ಕಬ್ಬು,ಬಾರಿಕಾಯಿ,ಪೇರಲಕಾಯಿ,ಸುಲಗಾಯಿ ( ಹಸಿ ಕಡಲೆ) ಹಾಗೂ ತರತರಹದ ತರಕಾರಿ , ಹೂವುಗಳ ಖರೀದಿ ಜೋರಾಗಿ ನಡೆಯಿತು. ಇದಲ್ಲದೇ ಇದೇ ಸಂದರ್ಭದಲ್ಲಿ ಮಾರುಕಟ್ಟೆಗೆ ಬರುವ ಗಾಣದುಂಡಿಯ ಮಾರಾಟ ವಿಶೇಷವಾಗಿತ್ತು.
ಇದಲ್ಲದೇ ಮಕರ ಸಂಕ್ರಮಣ ಹಬ್ಬದ ಪ್ರತೀಕವಾಗಿ ಪರಸ್ಪರ ವಿತರಿಸುವ ಕುಸುರೆಳ್ಳಿನ ಖರೀದಿಯೂ ನಡೆಯಿತು. ಹೋಳಿಗೆ ತಯಾರಿಕೆಗೆ ಬೇಕಾಗುವ ಬೆಲ್ಲ,ಸೇಂಗಾ, ಎಳ್ಳು ಖರೀದಿ ವಿಶೇಷವಾಗಿತ್ತು.