ಸಂಕ್ರಾಂತಿ ಹಬ್ಬಕ್ಕೆ ವಾರಾಂತ್ಯ ಕರ್ಫ್ಯೂ ಮಂಕು


ದಾವಣಗೆರೆ, ಜ.15: ರಾಜ್ಯದಲ್ಲಿ ಕೊರೊನಾ ಮತ್ತು ಓಮೈಕ್ರಾನ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳ ಜೊತೆಗೆ ವಾರಾಂತ್ಯ ಕರ್ಫೂ್ಯ ಜ.31ರವರೆಗೆ ಮುಂದುವರಿಸಿದ್ದು, ದೇವನಗರಿಯಲ್ಲಿ ವಾರಾಂತ್ಯದ ಕರ್ಫ್ಯೂ ಎರಡನೇ ವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಈ ವರ್ಷವೂ ಕೊರೊನಾ ಮಹಾಮಾರಿಯು ಸಂಕ್ರಾAತಿ ಸಂಭ್ರಮವನ್ನೇ ಕಿತ್ತುಕೊಂಡಿದೆ.
ವಾರಾAತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ
ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ, ಔಷಧಿ ಅಂಗಡಿ, ದಿನಸಿ ಅಂಗಡಿ, ಹೋಟೆಲ್, ಬೇಕರಿ, ಹಾಲಿನ ಡೈರಿ, ತರಕಾರಿ ಮತ್ತು ಹಣ್ಣುಗಳ ಮಾರಾಟ ಎಂದಿನAತೆ ನಡೆಯಿತು. ಹೋಟೆಲ್, ಬೇಕರಿಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ವಾಣಿಜ್ಯ ವಹಿವಾಟು ಸ್ಥಗಿತ:
ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದರಿಂದ ದಿನಸಿ, ಔಷಧಿ ಅಂಗಡಿ, ಪೆಟ್ರೋಲ್ ಬಂಕ್, ಹೋಟೆಲ್ ಹೊರತುಪಡಿಸಿದರೆ, ಇನ್ನುಳಿದಂತೆ ಬಟ್ಟೆ ಅಂಗಡಿ, ಚಿನ್ನಾಭರಣ, ಪಾತ್ರೆ ಸೇರಿದಂತೆ ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ ವಾಣಿಜ್ಯ ಪ್ರದೇಶಗಳಾದ ವಿಜಯಲಕ್ಷಿö್ಮÃರಸ್ತೆ, ಕೆ.ಆರ್.ಮಾರುಕಟ್ಟೆ, ಗಡಿಯಾರ ಕಂಬ, ತಾಲೂಕು ಕಚೇರಿ, ಬಿನ್ನಿ ಕಂಪನಿ ರಸ್ತೆ, ಇಸ್ಲಾಂಪೇಟೆ, ಎಂ.ಜಿ.ರಸ್ತೆ, ಮಂಡಿಪೇಟೆ, ಚೌಕಿಪೇಟೆ, ದೊಡ್ಡಪೇಟೆ, ಚಾಮರಾಜಪೇಟೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ತಳ್ಳುವ ಗಾಡಿಯಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುತ್ತಿರುವುದು ಕಂಡು ಬಂತು. ಆದರೆ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಾರದಿದ್ದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚು ಜನರು, ವಾಹನಗಳ ದಟ್ಟಣೆ ಇಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿರುವುದು ಕಂಡು ಬಂತು.
ಆಟೋ, ಬಸ್ ಸಂಚಾರ ವಿರಳ:
ಮುಂದುವರಿದ ವಾರಾಂತ್ಯ ಕರ್ಫ್ಯೂ ವೇಳೆ ಬಸ್, ಆಟೋ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲದೆ ಬಸ್ ಮತ್ತು ಆಟೋ ಸಂಚಾರ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇದ್ದರೂ ಪ್ರಯಾಣಿಕರ ಕೊರತೆ ಇದ್ದು, ಬೆರಳೆಣಿಕೆ ಪ್ರಯಾಣಿಕರು ಬಸ್ ಹತ್ತುವುದು ಕಂಡು ಬಂತು.
ಬಹುತೇಕ ದೇವಸ್ಥಾನಗಳು ಬಂದ್:
ಮುAದುವರಿದ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರ ದೇವತೆ ಶ್ರೀದುರ್ಗಾಂಬಿಕ ದೇವಸ್ಥಾನ, ಶ್ರೀವೀರಭದ್ರೇಶ್ವರ ದೇವಸ್ಥಾನ, ಬಕ್ಕೇಶ್ವರ ದೇವಸ್ಥಾನ ಸೇರಿದಂತೆ ನಗರದ ಬಹುತೇಕ ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು. ಆದರೆ ಭಕ್ತರು ಹೊರಗಡೆಯಿಂದಲೇ ಕೈ ಮುಗಿದು ಭಕ್ತಿ ಸಮರ್ಪಿಸುತ್ತಿರುವುದು ಅಲ್ಲಲ್ಲಿ ಕಂಡು ಬಂತು.
ಓಡಾಡುವ ಜನರಲ್ಲಿ ಮಾಸ್ಕ್ ಕಣ್ಮರೆ:
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಮನೆ ಬಿಟ್ಟು ಹೊರ ಬಾರದಿದ್ದರೂ ಅಗತ್ಯ ವಸ್ತುಗಳ ಖರೀದಿ ಮತ್ತು ತುರ್ತು ಕಾರ್ಯಗಳಿಗೆ ಹೊರ ಬಂದ ಬಹುತೇಕ ಜನರು ಮಾಸ್ಕ್ ಧರಿಸದೆ ಓಡಾಡುವುದು ಎರಡನೇ ವಾರಾಂತ್ಯದ ಕರ್ಫ್ಯೂ ವೇಳೆಯೂ ಕಂಡು ಬಂತು.
ಭಾನುವಾರ ಸಂತೆ ರದ್ದು:
ಮುಂದುವರಿದ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರದ ಸಂತೆ ರದ್ದು ಪಡಿಸಲಾಗಿದೆ. ತಳ್ಳುವ ಗಾಡಿಯಲ್ಲಿ ತರಕಾರಿ ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂತೆ ರದ್ದು ಮಾಡಿದ್ದರೂ ತರಕಾರಿ, ಹಣ್ಣು, ಮೀನು, ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಸಂತೆ ಪ್ರದೇಶದಲ್ಲಿ ಗುಂಪು, ಗುಂಪಾಗಿ ಸೇರಿಕೊಂಡು ತರಕಾರಿ ಮಾರಾಟ ಮಾಡಲು ಅವಕಾಶವಿಲ್ಲ. ತಳ್ಳುವ ಗಾಡಿಯ ಮೂಲಕ ಅಥವಾ ಅಲ್ಲೊಬ್ಬರು, ಇಲ್ಲೊಬ್ಬರು ನಿಂತು ತರಕಾರಿ, ಹಣ್ಣು ಮಾರಾಟ ಮಾಡಬಹುದು. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಗಿರೀಶ್ ಎಚ್ಚರಿಸಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್:
ಮುAದುವರಿದ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಅನಗತ್ಯ ಓಡಾಡುವವರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿರುವುದು ಕಂಡು ಬಂತು.