ಸಂಕ್ರಾಂತಿ ಸಂಭ್ರಮ

ಕೋಲಾರ,ಜ,೨೧-ನಗರದ ಜಿಪಂ ಆವರಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸರಸ್ವತಿ ಮಹಿಳಾ ಮಂಡಳಿಯ ವಾತ್ಸಲ್ಯ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳೊಂದಿಗೆ ಪೋಷಕರು ಸಂಕ್ರಾಂತಿ ಸಂಭ್ರಮ ಆಚರಿಸಲಾಯಿತು.
ಇಲ್ಲಿನ ಶಿಶುಪಾಲನಾ ಕೇಂದ್ರದಲ್ಲಿ ಸುಮಾರು ೨೫ ಮಕ್ಕಳಿದ್ದು ಮಕ್ಕಳಿಗೆ ಕಬ್ಬು, ಎಳ್ಳು ಬೆಲ್ಲ, ಬಳೆ, ಹಣ್ಣು ಹಂಪಲು ಹಾಗೂ ವಿವಿಧ ಬಗೆಯ ಆಹಾರ ಧಾನ್ಯ ನೀಡುವ ಮೂಲಕ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಹಾಗೂ ಪೋಷಕರು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿದರು ನಂತರ ಮಕ್ಕಳು ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡರು.