ಸಂಕ್ರಾಂತಿ ಸಂಭ್ರಮ ಬೋಗಿಯಲ್ಲಿ ಭಾಗಿಯಾದ ಜನ

ಬಳ್ಳಾರಿ ಜ 13 : ಕೋವಿಡ್ ಸಂಕಷ್ಟವನ್ನು ಮರೆತು ಜಿಲ್ಲೆಯಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಜನರಿದ್ದಾರೆ.
ನಗರ ಪ್ರದೇಶದಲ್ಲಿನ‌ವನಿವಾಸಿಗಳ ತಮ್ಮ ಮನೆಯ ಮುಂದೆ ಸೆಗಣಿ ಸಾರಿಸಿ ಅ್ರ ಮೇಲೆ ರಂಗು ರಂಗಿನಿಂದ, ವಿವಿಧ ಚಿತ್ತಾರದ ರಂಗೋಲಿಗಳನ್ನು ಹಾಕಿ ಗೊಂಬೆಮ್ಮನನ್ನು ಪ್ರತಿಷ್ಟಾಪಿಸಿರುವುದು ಕಂಡು ಬಂತು.
ತಾಲೂಕಿನ‌ ಕೊಳಗಲ್ಲು ಗ್ರಾಮದ ಬಳಿಯ ಕೃಷ್ಣಾನಗರ ಕ್ಯಾಂಪಿನಲ್ಲಿ ಯುವಕ-ಯುವತಿಯರು ಹಾಗೂ ಮಹಿಳೆಯರು, ಪುರುಷರು ಸೇರಿಕೊಂಡು ಸಂಕ್ರಾಂತಿ ಸಂಭ್ರಮದಲ್ಲಿ ತೊಡಗಿದ್ದಾರೆ.
ಹಬ್ಬದ ನಿಮಿತ್ತ ಈ ದಿನ ಬೋಗಿಯನ್ನು ಆಚರಿಸಲಾಯಿತು. ಅದಕ್ಕಾಗಿ
ಬೆಳ್ಳಂ ಬೆಳಗ್ಗೆ ಎದ್ದು ಮನೆಯಂಗಳವನ್ನು ಸಗಣಿ ನೀರಿನಿಂದ ಸಾವರಿಸಿ, ಬಣ್ಣಬಣ್ಣದ ರಂಗೋಲಿ ಹಾಕಲಾಗಿತ್ತು. ಇದಕ್ಕೂ ಮುಂಚೆಯೇ ಕಟ್ಟಿಗೆಯಿಂದ ತ್ರಿಕೋನಾಕಾರದಲ್ಲಿ ಜೋಡಿಸಿ ಸುಡಲಾಯಿತು. ಬಳಿಕ ತರುಣಿಯರು ಅದರ ಸುತ್ತಲೂ ಕುಣಿದು ಕುಪ್ಪಳಿಸಿದ್ರು.
ಹಬ್ಬದ ಸಂಭ್ರಮದ ಬಗ್ಗೆ ಮಾತನಾಡಿದ ಯುವತಿಯರು ದೂರದ ಊರುಗಳಿಗೆ ಶಿಕ್ಷಣ ಪಡೆಯಲು ಹೋದರೂ ಸಹ ಹಬ್ಬದಈ ದಿನದಂದು ಇಲ್ಲಿಗೆ ಬಂದು ಸೇರುತ್ತೇವೆ. ಸಂಕ್ರಾಂತಿ ಹಬ್ಬವೆಂದರೆ ಬಲು ಇಷ್ಟ. ಹೀಗಾಗಿ, ಪ್ರತಿಯೊಬ್ಬರ ಮನೆಯಂಗಳದಲ್ಲಿ ರಂಗೋಲಿಯ ಚಿತ್ತಾರ ಬಿಡಿಸುತ್ತೇವೆ ಎಂದರು.
ಸಂಕ್ರಾಂತಿ ಹಬ್ಬವನ್ನ ಈ ಕ್ಯಾಂಪಿನಲ್ಲಿ ಮೂರು ದಿನಗಳಕಾಲ ಆಚರಿಸಲಾಗುತ್ತೆ. ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ಸಂಭ್ರಮ ಮೇಳೈಸಿದೆ.
ಈ ದಿನ ಬೋಗಿ, ನಾಳೆಯ ದಿನ ಸಂಕ್ರಾಂತಿ ಹಾಗೂ ಮಾರನೇ ದಿನವೂ ಕೂಡ ಈ ಹಬ್ಬವನ್ನ‌ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತೆ.
ಎಲ್ಲಡೆ ಬಣ್ಣಬಣ್ಣದ ರಂಗೋಲಿ ಚಿತ್ತಾರವು ನೋಡುಗರ ಕಣ್ಮನ ಸೆಳೆಯುತ್ತಿದೆ.
ಇನ್ನು ಇಂದು ಎಳ್ಳ ಅಮವಾಸೆ ಆಗಿದ್ದರಿಂದ ಗ್ರಾಮೀಣ ಭಾಗದಲ್ಲಿ ರೈತರು ತಮ್ಮ‌ ಜಮೀನುಗಳಲ್ಲಿ ಪಾಂಡವರನ್ನು ಪ್ರತಿಷ್ಟಾಪಿಸಿ ಚರಗ ಚೆಲ್ಲೋ ಹಬ್ಬವನ್ನ ಆಚರಿಸಿದರು.