ಸಂಕ್ರಾಂತಿ ಶುಭ ಕೋರಿದ ದರ್ಶನ್ ಅಪ್ಪು ರಮೇಶ್

ಬೆಂಗಳೂರು, ಜ.೧೪- ಸಂಕ್ರಾಂತಿ ಹಬ್ಬ ಎಲ್ಲರ ಜೀವನದಲ್ಲಿ ಹೊಸ ಹುರುಪು ತರಲಿ. ಕೊರೊನಾ ದೂರಾಗಿ ಉತ್ಸಾಹ ಮೂಡಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭ ಕೋರಿದ್ದಾರೆ. ರಾಜ್‌ಕುಮಾರ್ ಅವರು ಭತ್ತವನ್ನು ಕೈಯಲ್ಲಿ ಹಿಡಿದಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಪ್ಪು ಜನತೆಗೆ ಶುಭ ಕೋರಿದ್ದಾರೆ.
ನಟ ರಮೇಶ್ ಅರವಿಂದ್ ಶುಭ ಕೋರಿದ್ದು, ಸಂತೋಷದ ಸುಗ್ಗಿ ಸಂಗಾತಿ ಆಗಲಿ… ಸದಾ..ಸದಾ.. ಸದಾ.. ಮಕರ ಸಂಕ್ರಾಂತಿಯ ಶುಭಾಶಯಗಳು ಎಂದಿದ್ದಾರೆ
ಇನ್ನು ಮದಗಜ ಚಿತ್ರತಂಡ ಇಂದು ತಮಿಳು ಟೀಸರ್ ರಿಲೀಸ್ ಮಾಡಲಿದ್ದರೆ, ಉಪೇಂದ್ರ ಕಬ್ಜ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ನೀಡಲಿದ್ದಾರೆ.
ರಿಷಭ್ ಶೆಟ್ಟಿ ಅವರ ಹೀರೋ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಸಂಜೆ ೬ಕ್ಕೆ ದುನಿಯಾ ವಿಜಯ್ ಫೇಸ್‌ಬುಕ್‌ನಲ್ಲಿ ಲೈವ್ ಬರಲಿದ್ದು ಸಲಗ ಚಿತ್ರದ ಕುರಿತಾದ ಮಾಹಿತಿ ನೀಡಲಿದ್ದಾರೆ