
ಸಿನಿಮಾ ಶೈಲಿಯಲ್ಲೇ ಕಿರುಚಿತ್ರಗಳೂ ಗುಣಮಟ್ಟದಲ್ಲಿ, ಅದ್ದೂರಿಯಾಗಿ ನಿರ್ಮಾಣವಾಗುತ್ತಿವೆ. ನೋಡುಗರ ಸಂಖ್ಯೆಯೂ ದ್ವಿಗುಣವಾಗಿದೆ. ಸಿನಿಮಾಗೆ ಕಡಿಮೆ ಇಲ್ಲದೆ “ಆಂಟಿಬಯೋಟಿಕ್” ಕಿರುಚಿತ್ರ ಸದ್ದು ಮಾಡುತ್ತಿದೆ.
ಸಂಕ್ರಾಂತಿಗೆ ಬಿಡುಗಡೆಯಾಗಿದ್ದು ಸಾಕಷ್ಟು ಕಿರುಚಿತ್ರ ನಿರ್ದೇಶಿಸಿರುವ ದೀಪ್ತಿರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೈಕಾಲಾಜಿಕಲ್ ಥ್ರಿಲ್ಲರ್ ಶೈಲಿಯ ಕಥಾಹಂದರವುಳ್ಳ ಕಿರುಚಿತ್ರದಲ್ಲಿ ವ್ಯವಸ್ಥೆಯ ಬಗ್ಗೆ ಒಬ್ಬ ವ್ಯಕ್ತಿಗೆ ಇರಬಹುದಾದ ದೃಷ್ಟಿಕೋನ ಹೇಳಲಾಗಿದೆ. ಹಾಸನ ಮೂಲದ ಚಿದಾನಂದ್ ಹಾಗೂ ಖುಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಉಳಿದ ಪಾತ್ರಗಳಲ್ಲಿ ವೈರಲ್ ಶೇಖರ್, ಸಚಿನ್, ಸಂತೋಷ್ ನಟಿಸಿದ್ದಾರೆ.
ಚಿತ್ರಕ್ಕೆ ಅಶೋಕ್ ಹಣಗಿಯವರ ಛಾಯಾಗ್ರಹಣ, ವೀರ್ ಸಮರ್ಥ್ ಹಿನ್ನೆಲೆ ಸಂಗೀತವಿದೆ. ಉಳಿದಂತೆ ಅತೀಶ್ ಕಥೆ, ಯಶವಂತ್ ಪಟೇಲ್ ಸಂಭಾಷಣೆಯಿದೆ. ಕಿರುಚಿತ್ರವನ್ನಿ ಡಿ. ಎಸ್. ಕೆ. ಓಟಿಟಿ ಕಂಪನಿಯ ಸಹಯೋಗದೊಂದಿಗೆ ಹಲವು ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಸಂಕ್ರಾಂತಿ ಹಬ್ಬದ ದಿನ ಬಿಡುಗಡೆಯಾಗಿದೆ.