ಸಂಕ್ರಾಂತಿಯಂಗವಾಗಿ ಗಾಳಿಪಟ ಹಾರಿಸಲು ಜನರು ಸಜ್ಜು

ಹುಮನಾಬಾದ್ : ಜ.14:ಮಕರ ಸಂಕ್ರಾಂತಿ ಹಬ್ಬವನ್ನು ರಾಜ್ಯದ ವಿವಿಧೆಡೆ ಎಳ್ಳು ಬೆಲ್ಲ ಪರಸ್ಪರ ವಿನಿಮಯ ಮಾಡಿಕೊಳ್ಳುವ ಹಬ್ಬವಾಗಿ ಆಚರಿಸಲ್ಪಟ್ಟರೇ ಕಲ್ಯಾಣ ಕರ್ನಾಟಕ ಭಾಗದ ಹುಮನಾಬಾದ ಪಟ್ಟಣದಲ್ಲಿ ಮಾತ್ರ ಪ್ರತಿ ವರ್ಷ ಜನೆವರಿ 14 ರಂದು ಸಂಕ್ರಮಣ ಹಬ್ಬ ಹಾಗೂ 15 ರಂದು ಕರಿ ಎಂದು ಎಳ್ಳುಬೆಲ್ಲದರ ಜೋತೆಯಲ್ಲಿ ಗಾಳಿಪಟ (ಪತಂಗ್) ಹಾರಿಸುವ ಮೂಲಕ ಹಬ್ಬ ಸಂಭ್ರಮದಿಂದ ಆಚರಿಸುತ್ತಾರೆ.
ಎರಡು ದಿನಗಳ ಕಾಲ ಮನೆಯ ಛಾವಣಿಗಳ ಮೇಲೆ ಶಾಮಿಯಾನ, ಧ್ವನಿವರ್ಧಕ, ತಮಟೆ, ವಾದ್ಯಗಳು ಬಾರಿಸುವ ಮೂಲಕ ಚಿಣ್ಣರಿಂದ ಹಿಡಿದು ವೃದ್ಧರ ವರೆಗಿನ ವರೆಗೆ ಸರ್ವ ಧರ್ಮಿಯರು, ಉತ್ಸಾಹದಿಂದ ಗಾಳಿಪಟ ಹಾರಿಸುವ ಮೂಲಕ ಸಂಭ್ರಮಿಸುತ್ತಾರೆ. ಅಲ್ಲದೆ ಗೇಳೆಯರಿಗೆ, ಅಥಿತಿಗಳಿಗೆ ಮೃಷ್ಠಾಂಗ ಭೂಜನ, ಮಿರ್ಚಿ ಭಜಿ, ಉಪ್ಪಿಟ್, ಸೂಶಿಲಾ ಆಯೋಜಿಸಲಾಗುತ್ತದೆ.
ಗಾಳಿಪಟಗಳಿಗೂ ಆಕ್ರತಿಯ ಅನುಗುಣವಾಗಿ ಪ್ರತೆಕ ಹೆಸರುಗಳಿದ್ದು ಅವಗಳನ್ನು ಪಟೆದಾರ, ಏಕ ಕನ್ಯದಾರ ದೋ ಕನ್ಯದಾರ, ಪೋ ಟ್ಯಾವ್, ಬಾಲಧರಿ ಹೆಸರಿನ ಮೂಲಕ ಕರೆಯಲಾಗುತ್ತದೆ. ಇತೀಚಿಗೆ ಮೋದಿ, ನೋಟಬಂದಿ, ಸೇರಿದಂತೆ ಮಹಾಪುರುಷರ ಹೆಸರಿನ ಗಾಳಿಪಟಗಳು ಪಟ್ಟಣದ ಮಾರುಕಟೆಗಳಲ್ಲಿ ಲಗ್ಗೆ ಇಟಿವೆ.
ಹಬ್ಬಕ್ಕಾಗಿ ತಿಂಡಿ ಪದಾರ್ಥ ಖರೀದಿ
ಮಕರ ಸಂಕ್ರಮಣ ನಿಮಿತ್ತ ಹುಮನಾಬಾದ್ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರ ಪಟ್ಟಣದ ಸೇರಿದಂತೆ ತಾಲೂಕಿನ ವ್ಯಾಪ್ತಿಯ ಗ್ರಾಮೀಣ ಭಾಗದ ಹಳ್ಳಿಗಳ ಜನರು ತಿಂಡಿ ಪದಾರ್ಥ ಖರೀದಿ ಜೋರಾಗಿತ್ತು.
ಹಬ್ಬದ ಆಚರಣೆಗಾಗಿ ಸುಲಿಗೆಕಾಯಿ, ಬಟಾಣಿಕಾಯಿ, ಖಜೂರ, ದುಬಲಗುಂಡಿ ಸ್ಪೇಷಲ್ ಮಸಾಲ ಉಂಡಿ, ಕಬ್ಬು, ಕ್ಯಾರಿಕಾಯಿ, ಬಾರಿಕಾಯಿ, ಸೇಬು ಹಣ್ಣು, ಸೀಬೆ ಹಣ್ಣು (ಜಾಪುಳಕಾಯಿ), ಶೇಂಗಾ, ಕಾಶಿ ಬಾರಿಕಾಯಿ, ಬಾಳೆಹಣ್ಣು, ಕ್ಯಾರೇಟ್, ಗೋಡಂಬಿ, ದ್ರಾಕ್ಷಿ, ಬಾದಮ್ ಸೇರಿದಂತೆ ಮತ್ತಿತರರ ತಿಂಡಿ ಪಾದಾರ್ಥಗಳ ಖರೀದಿಗಾಗಿ ಜನ ಮುಗಿಬಿದ್ದಿತ್ತು.