ಸಂಕ್ರಮಣ ಜಾತ್ರೆ: ಗಮನ ಸೆಳೆದ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ

ವಿಜಯಪುರ,ಜ.17:ವಿಜಯಪುರ ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ಜಾತ್ರೆ ಹಿನ್ನಲೆ ನಗರದ ಕೋರಿ ಚೌಕ್ ನಲ್ಲಿ
ಸಾಂಪ್ರದಾಯಿಕ ಮದ್ದು ಸುಡುವ ಕಾರ್ಯಕ್ರಮ ನಡೆಯಿತು.
ಪ್ರತಿ ವರ್ಷ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಮದ್ದು ಸುಡುವ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಿದ ಕಾರಣ ಕೋರಿ ಚೌಕ್ ನಲ್ಲಿ ಸಾಂಕೇತಿಕ ಹಾಗೂ ಸರಳವಾಗಿ ಮದ್ದು ಸುಡುವ ಕಾರ್ಯಕ್ರಮ ನೆರವೇರಿತು.
ವಿವಿಧ ಪಟಾಕಿಗಳ ಸಿಡಿತ ನೋಡಲು ಸಾವಿರಾರು ಜನರು ನೆರೆದಿದ್ದರು.
ಬಾನಂಗಳದಲ್ಲಿ ತರೇಹವಾರಿ ಪಟಾಕಿ ಚಿತ್ತಾರವನ್ನು ಜನರು ಕಣ್ತುಂಬಿಕೊಂಡರು.
ಕೋರಿ ಚೌಕ್ ಸುತ್ತಮುತ್ತ ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.