ಸಂಕಷ್ಟದ ಸಮಯದಲ್ಲಿ ಬಡ ಕುಟುಂಬಗಳಿಗೆ ಆಸರೆಯಾದ ಡಿಸಿಎಂ ಲಕ್ಷ್ಮಣ ಸವದಿ

ಅಥಣಿ, ಜೂ8 : ಕೊರೋನಾ ಎರಡನೇ ಅಲೆಯು ರಾಜ್ಯದಲ್ಲಿ ಅಷ್ಟೇ ಅಲ್ಲ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೂ ಆದ ಲಕ್ಷಣ ಸವದಿ ಅವರ ಸುಪುತ್ರ ಹಾಗೂ ಅವರ ಸಂಗಡಿಗರು ಅಥಣಿ ಪಟ್ಟಣ ಹಾಗೂ ಮತಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳಿಗೆ ತಲುಪಿ ಬಡ ಜನರಿಗೆ ದವಸಧಾನ್ಯಗಳ ಕಿಟಗಳನ್ನು ಸತ್ಯ ಸಂಗಮ ಗ್ರಾಮ ವಿಕಾಸ್ ಪ್ರತಿಷ್ಠಾನ ವತಿಯಿಂದ ವಿತರಿಸುತ್ತಿದ್ದಾರೆ.
ಇಂದು ಸಪ್ತಸಾಗರ, ಯಲಿಹಡಲಗಿ, ಹಾಗೂ ಅಡಹಳಟ್ಟಿ, ಗ್ರಾಮದಲ್ಲಿ ವಿತರಿಸುವ ಮೂಲಕ ಕ್ಷೇತ್ರದ ಜನರ ಸಹಾಯಕ್ಕೆ ಮುಂದಾದ ಜನನಾಯಕ ಡಿಸಿಎಂ, ಲಕ್ಷ್ಮಣ ಸವದಿ ಅವರ ಈ ಕಾರ್ಯಕ್ಕೆ ಅಥಣಿ ತಾಲೂಕಿನ ಸಾರ್ವಜನಿಕರಿಂದ ಅಷ್ಟೇ ಅಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಕೂಡಾ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈಗಾಗಲೇ ಅಥಣಿ ಗ್ರಾಮೀಣ ಭಾಗದಲ್ಲಿ ಸುಮಾರು ಐವತ್ತು ಸಾವಿರ ಬಡ ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು 7 ಕಿಲೋ ಗೋಧಿ, 1ಕಿಲೋ ಬೇಳೆ, 1ಕಿಲೋ ಸಕ್ಕರೆ, 1 ಕಿಲೋ ಅವಲಕ್ಕಿ, 1 ಕಿಲೋ ತೊಗರಿಬೇಳೆ, 1 ಕಿಲೋ ಕಡಲೆಬೇಳೆ, 1ಕಿಲೋ ಬೆಲ್ಲ, 250 ಗ್ರಾಂ ಟೀ ಪೌಡರ್, 100 ಗ್ರಾಂ ಸಾಂಬರ್ ಪದಾರ್ಥ, 100 ಗ್ರಾಂ ಖಾರ, 180 ಗ್ರಾಂ ತೂಕದ 2 ಬಿಸ್ಕೆಟ್ ಪ್ಯಾಕೆಟ್ ಹಾಗೂ 1 ಕಿಲೋ ರವೆ ಸೇರಿದಂತೆ ರೇಷನ್ ಕಿಟ್ ವಿತರಣೆ ಮಾಡುತ್ತಿದ್ದಾರೆ.
ಈ ವೇಳೆ ಉದ್ಯಮಿ ಸಂತೋಷ್ ಸಾವಡಕರ ಮಾತನಾಡಿ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ಮೂಲಕ ಡಿಸಿಎಂ ಲಕ್ಷ್ಮಣ ಸವದಿ ಅವರು ತಮ್ಮ ಕ್ಷೇತ್ರದ ನಿರ್ಗತಿಕರು, ಬಡವರು, ಹಾಗೂ ಬಡ ಕೂಲಿ ಕಾರ್ಮಿಕರು, ಅಲೆಮಾರಿ ಜನಾಂಗದವರ ಅನುಕೂಲಕ್ಕಾಗಿ ಧವಸ ಧಾನ್ಯ ಹಂಚುತ್ತಿದ್ದಾರೆ. ಜನರು ಸಹ ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಅವರ ಸೂಚನೆ ಹಾಗೂ ಅವರ ಮಾರ್ಗದರ್ಶನದ ಮೇರೆಗೆ ಅವರ ಕುಟುಂಬದವರಾದ ಚಿದಾನಂದ ಸವದಿ, ಶಶಿಕಾಂತ ಸವದಿ, ಸುಮಿತ ಸವದಿ ಹಾಗೂ ಶಿವಕುಮಾರ ಸವದಿ ಅವರ ನೇತೃತ್ವದಲ್ಲಿ ನಾವು ಪ್ರತಿ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡುತ್ತಿದ್ದು, ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ದಿ, 14 ರ ವರೆಗೆ ಲಾಕ್‍ಡೌನ್ ಮುಂದುವರಿಸಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಹಸಿವಿನಿಂದ ಯಾರು ಸಹ ಉಪವಾಸ ಮಲಗಬಾರದು ಅನ್ನುವ ಉದ್ದೇಶದಿಂದ ಅಥಣಿ ಪಟ್ಟಣ ಹಾಗೂ ಹಳ್ಳಿಗಳಿಗಳಲ್ಲಿ ಇರುವ ಬಡ ಜನರಿಗೆ ಆಹಾರ ದಾನ್ಯಗಳನ್ನು ವಿತರಣೆ ಮಾಡುತ್ತಿರುವದಾಗಿ ಹೇಳಿದರು.
ಈ ಸಂಧರ್ಬದಲ್ಲಿ ಮುಖಂಡರಾದ ರಾಜು ಬುಲಬುಲೆ, ಎ ಎಮ್ ಖೊಬ್ರಿ, ರಾಮನಗೌಡಾ ಪಾಟೀಲ, ಅಜೀತ್ ಪವಾರ, ಶ್ರೀ ಶೈಲ ನಾಯಿಕ, ಪ್ರದೀಪ ನಂದಗಾಂವ, ಆಶೀಪ ತಾಂಬೋಳಿ, ಅಲ್ತಾಫ ಗಡ್ಡೆಕರ, ಶ್ರೀ ಶೈಲ ಲೋಣಾರೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಅವರ ಸುಪುತ್ರರಾದ ಚಿದಾನಂದ ಸವದಿ, ಶಿವಕುಮಾರ ಸವದಿ, ಶಶಿಕಾಂತ ಸವದಿ ಹಾಗೂ ಸುಮಿತ್ ಸವದಿ, ಕುಟುಂಬದ ನೇತೃತ್ವದಲ್ಲಿ ಅವರ ಸಂಗಡಿಗರು ಈಗಾಗಲೇ ತಾಲೂಕಿನಲ್ಲಿ 50 ಸಾವಿರ ಆಹಾರ ಧಾನ್ಯಗಳ ಕೀಟಗಳನ್ನು ವಿತರಿಸಲಾಗಿದೆ.ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ವಿತರಿಸುವ ಕಾರ್ಯ ಮುಂದುವರೆದಿದೆ ಹಾಗೂ ಸಂಕಷ್ಟದ ಸಮಯದಲ್ಲಿ ಕೈ ಹಿಡಿದಿರುವ ಡಿಸಿಎಂ ಸವದಿ ಅವರಿಗೆ ಕ್ಷೇತ್ರದ ಜನತೆಯಿಂದ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ ನಾವೆಲ್ಲರೂ ಇವರಿಗೆ ಚಿರಋಣಿ ಯಾಗಿದ್ದೇವೆ. ಸಮಸ್ತ ತಾಲೂಕಿನ ಜನತೆಯ ಪರವಾಗಿ ಡಿಸಿಎಂ. ಸವದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಸುಶೀಲಕುಮಾರ್ ಪತ್ತಾರ
ಬಿಜೆಪಿ ಮುಖಂಡರು ಹಾಗೂ ವಕೀಲರು