ಸಂಕಷ್ಟದ ಜನರಿಗಾಗಿ ಮೈಸೇವ ತಂಡದಿಂದ ಉಚಿತ ಆಂಬುಲೆನ್ಸ್ ಸೇವೆ

ಬಳ್ಳಾರಿ, ಮೇ.29: ಕೋವಿಡ್ ಸಂಕಷ್ಟದಲ್ಲಿನ ಜನರ ನೆರವಿಗಾಗಿ ಮೈ ಸೇವ ತಂಡದಿಂದ ಉಚಿತ ಆಂಬುಲೆನ್ಸ್ ಸೇವೆಯನ್ನು ಇಂದಿನಿಂದ ಆರಂಭಿಸಿದ್ದು. ಇದಕ್ಕೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಬಿಜೆಪಿ ಕಚೇರಿ ಬಳಿ ಚಾಲನೆ ನೀಡಿದರು.
ಕೋವಿಡ್ -19 ಮಹಾಮಾರಿಯಿಂದ ರಾಜ್ಯದ ಜನತೆ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರ ಸೇವೆ ತಂಡದಿಂದ ಉಚಿತ ಆಂಬುಲೆನ್ಸ್ ಸೇವೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒದಗಿಸಲಾಗಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ಪಕ್ಷದ ಯುವ ಮೋರ್ಚಾ ಬಳ್ಳಾರಿ ನಗರ ಪ್ರಧಾನ ಕಾರ್ಯದರ್ಶಿ,
ಓಂ ಪ್ರಕಾಶ್ ಅವರನ್ನು ಸಂಚಾಲಕರನ್ನಾಗಿ ಮಾಡಿದೆ. ಕೋವಿಡ್ ನಿಂದ ಸಂಕಷ್ಟದಲ್ಲಿರುವ ಜನತೆ ಪ್ರಕಾಶ್ ಅವರ 9060382926 ಮೊಬೈಲ್ಗೆ ಕರೆ ಮಾಡಿದರೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಿದ್ದಾರೆಂದು ಶಾಸಕ ಸೋಂಶೆಖರರೆಡ್ಡಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರು ಲಿಂಗನಗೌಡ, ಸಫಾಯಿ ಕರ್ಮಚಾರಿ ನಿಗಮ ಮಂಡಳಿ ಅಧ್ಯಕ್ಷ ಹನುಮಂತಪ್ಪ, ಕೆಎಂಎಫ್ ನಿರ್ದೇಶಕ ವೀರಶೇಖರ್ ರೆಡ್ಡಿ, ಪಕ್ಷದ ಬಳ್ಳಾರಿ ನಗರ ಅಧ್ಯಕ್ಷ ಕೆಬಿ.ವೆಂಕಟೇಶ್ವರ, ನಗರ ಪ್ರಧಾನ ಕಾರ್ಯದರ್ಶಿ ರಾಮಾಂಜಿ, ಯುವ ಮೋರ್ಚಾ ಅಧ್ಯಕ್ಷ ಅರುಣ್ ಬಾಲಚಂದ್ರ, ಮೀಡಿಯಾ ಸಂಚಾಲಕ ರಾಜೀವ್, ಕೃಷ್ಣಾರೆಡ್ಡಿ, ಜೀವನ್ ಕೃಷ್ಣಾ ಮೋಹನ್, ಕುಮಾರಸ್ವಾಮಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.