ಸಂಕಷ್ಟದ ಜನತಗೆ ಕುಡಿಯುವ ನೀರಿನ ಸೌಲಭ್ಯ

ಬಳ್ಳಾರಿ, ಮೇ.27: ನೀರಿನ ಸಮಸ್ಯೆ ಎದುರಿಸುತ್ತಿದ್ದ ನಗರದ ರೇಡಿಯೋ ಪಾರ್ಕಿನ ಓಲ್ಡ್ ಟ್ರಂಕ್ ರೋಡಿನ‌ ಜನತೆಗೆ ಆ ಸಮಸ್ಯೆಯನ್ನು ಆ ವಾರ್ಡಿನ ಕಾರ್ಪೋರೆಟರ್ ಎಂ.ಗೋವಿಂದರಾಜುಲು ಬಗೆಹರಿಸಿದ್ದಾರೆ. ಅದೂ ತಮ್ಮ ಸ್ವತ ಖರ್ಚಿನಲ್ಲಿ.
ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಜನತೆ ನೀರಿನ ಸಮಸ್ಯೆ ಬಗ್ಗೆ ತಿಳಿಸಿದ್ದರು. ಚುನಾವಣೆಯ ನಂತರ ಒಂದು ತಿಂಗಳಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದೆ. ಅದರಂತೆ ವಾರ್ಡಿನ ಆರು ಕಡೆಗಳಲ್ಲಿ ಈ ರೀತಿ ಮಾಡುತ್ತಿರುವೆ. ಇದು ಇತ್ತೀಚೆಗೆ ನಿಧನರಾದ ನನ್ನ ತಾಯಿಯ ಸ್ಮರಣೆಗಾಗಿ ಎಂದು ಗೋವಿಂದರಾಜುಲು ಹೇಳಿದರು.
ಇಂದು ಇದಕ್ಕೆ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎ.ಎಂ.ಸಂಜಯ್ ಮೊದಲಾದವರು ಇದ್ದರು.
ಈ ಕುಡಿಯುವ ನೀರಿನ ಕಿರು ಯೋಜನೆಯ ಟ್ಯಾಂಕಿಗೆ ಬಿಜೆಪಿ ಪಕ್ಷದ ಧ್ವಜದ ಬಣ್ಣ ಕೇಸರಿ ಮತ್ತು ಹಸಿರು ಬಳಿದಿರುವ ಬಗ್ಗೆ ಮಾತ್ರ. ಇಲ್ಲಿನ‌ ಒಂದಿಷ್ಟು ಜನ ಜನರಿಗೆ ಸಹಕಾರ ಮಾಡುವುದರಲ್ಲಿಯೂ ರಾಜಕೀಯ ಪ್ರದರ್ಶನ ಸರಿಯಲ್ಲ ಬೇಕಿದ್ದರೆ ಗೋವಿಂದರಾಜುಲು ತನ್ಮ ಭಾವಚಿತ್ರ ಬರೆಸಿಕೊಳ್ಳಲಿ ಅದು ಬಿಟ್ಟು ಹೀಗೆ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.