ಸಂಕಷ್ಟದಲ್ಲೂ ಉದ್ದಿಮೆಗಳ ಸ್ಥಾಪನೆಗೆ ವಿಪುಲ ಅವಕಾಶ: ಮೋದಿ

ನವದೆಹಲಿ ನವೆಂಬರ್ ೨೧. ಸಾಂಕ್ರಾಮಿಕ ರೋಗದ ಉಪಟಳದ ನಡುವೆಯೂ ಜಗತ್ತಿನಲ್ಲಿ ಹಲವಾರು ಪ್ರಮುಖ ಬದಲಾವಣೆಗಳಾಗತ್ತಿವೆ ಹಾಗೂ ಉದ್ಯಮಶೀಲತೆ ಮತ್ತು ಉದ್ಯೋಗವಕಾಶಗಳ ಸೃಷ್ಟಿಗೆ ಹಲವಾರು ಅವಕಾಶಗಳು ಲಭ್ಯವಾಗುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಪಂಡಿತ್ ದೀನದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ ನರೇಂದ್ರ ಮೋದಿ ಅವರು, ಸಾಂಕ್ರಾಮಿಕ ರೋಗದ ನಡುವೆಯೂ ಇಂದು ನಾವು ಉದ್ಯಮಗ ಳ ಸ್ಥಾಪನೆಗೆ ಮುಂದಾಗಿದ್ದೇವೆ . ಜಗತ್ತಿನಾದ್ಯಂತ ಇಂಧನ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಕಾರ್ಯರೂಪಕ್ಕೆ ಬರುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ಉದ್ಯಮಗಳ ಸ್ಥಾಪನೆಗೆ ಹಾಗೂ ಉದ್ಯೋಗವಕಾಶಗಳ ಬೆಳವಣಿಗೆಗೆ ಹಲವಾರು ಅವಕಾಶಗಳು ನಮ್ಮ ಎದುರಿಗೆ ಕಂಡುಬರುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ನಿಮ್ಮ ಕೌಶಲ್ಯ ಪ್ರತಿಭೆ ಮತ್ತು ವೃತ್ತಿಪರತೆಯ ಮೂಲಕ ಪ್ರಸ್ತುತ ಎದುರಾಗಿರುವ ಪರಿಸ್ಥಿತಿಯನ್ನು ದಿಟ್ಟತನದಿಂದ ಎದುರಿಸಿ ಶಕ್ತಿಯುತವಾಗಿ ಹೊರಬರುವ ವಿಶ್ವಾಸ ತಮ್ಮದಾಗಿದೆ. ಆತ್ಮ ನಿರ್ಭರ ಭಾರತ ಅಭಿಯಾನದ ಬಹುದೊಡ್ಡ ಶಕ್ತಿಯಾಗಿ ನೀವೆಲ್ಲ ಹೊರಹೊಮ್ಮಲಿ ದ್ದೀ ರಿ ಎಂದು ತಿಳಿಸಿದರು.

ವಾಯು ಮಾಲಿನ್ಯ ತಡೆ ಕುರಿತು ಮಾತನಾಡಿದ ಪ್ರಧಾನಿ, ಪ್ರಸ್ತುತ ದರದಲ್ಲಿ ಅಗತ್ಯವಿರುವ ಇಂಧನ ಪೂರೈಸಲು ನೈಸರ್ಗಿಕ ಅನಿಲ ಬಳಕೆ ಪ್ರಮಾಣವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದರು.

ಇಡೀ ವಿಶ್ವ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಒಂದೇ ಸಮಯದಲ್ಲಿ ಪದವಿ ಪಡೆಯುವುದು ಸುಲಭದ ಮಾತಲ್ಲ ಆದರೆ ಇಂತಹ ಸವಾಲು ಗಳನ್ನು ಎದುರಿಸಿ ಹೋರಾಟದಿಂದ ಮುಂದೆ ಬಂದಿರುವ ನಿಮ್ಮ ಶಕ್ತಿ-ಸಾಮರ್ಥ್ಯಗಳು ಶ್ಲಾಘನೀಯ ಎಂದು ಹೇಳಿದರು.

ಯಾವುದೇ ಸಮಸ್ಯೆಗಳನ್ನು ಎದುರಿಸದೇ ಯಾವುದೇ ವ್ಯಕ್ತಿ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಯಾವ ವ್ಯಕ್ತಿ ಸವಾಲುಗಳನ್ನು ಎದುರಿಸಿ, ಸಂಘರ್ಷಗಳನ್ನು ಸಮರ್ಥವಾಗಿ ನಿಭಾಯಿಸಿ ಅವುಗಳನ್ನು ಮೆಟ್ಟಿನಿಂತು ಮುಂದೆ ಬಂದಾಗಲೇ ಯಶಸ್ಸು ತಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ಪ್ರಧಾನಿ ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿ, ಇತರ ಯೋಜನೆ ಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.