ಸಂಕಷ್ಟದಲ್ಲಿ ಸಹಾಯ ಹಸ್ತಚಾಚಲು ಮುಂದಾಗಿ: ಭಾರತಿ ಟಂಕಸಾಲಿ

ವಿಜಯಪುರ, ಮೇ.21-ಕೋವಿಡ್ ಮಹಾಮಾರಿಯಿಂದ ಸಾಕಷ್ಟು ಜನ ಬಡವರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದ್ದು. ಮಧ್ಯಮ ವರ್ಗ ಮತ್ತು ಬಡವರಿಗೆ ಲಾಕ್ಡೌನ್‍ದಿಂದಾಗಿ ಕೆಲಸವೂ ಇಲ್ಲದಂತಾಗಿ ಆರ್ಥಿಕವಾಗಿ ಅನೇಕ ವರ್ಗಗಳು ನರಳುತ್ತಿವೆ. ಬಡವರ ಬದುಕು ದುಸ್ತರವಾಗಿದೆ.
ಇಂತಹ ಸಂದರ್ಭದಲ್ಲಿ ಸಹಾಯ ಹಸ್ತ ಅನಿವಾರ್ಯವಾಗಿರುವುದನ್ನು ಮನಗಂಡು ಜೈ ಭಾರತ ಸೇವಾ ಸಮಿತಿ ವತಿಯಿಂದ ಭಕ್ತರಾದ ವಿಶ್ವಕರ್ಮ ಮಹಿಳಾ ಜಿಲ್ಲಾಧ್ಯಕ್ಷೆ ಭಾರತಿ ಟಂಕಸಾಲಿ, ನಿನ್ನೆ ತಮ್ಮ ಸ್ವಗೃಹದಲ್ಲಿ 50 ಜನ ಬಡವರಿಗೆ ಆಹಾರ ಧಾನ್ಯಗಳ ಕಿಟ್ ಹಂಚಿದರು.
ನಂತರ ಮಾತನಾಡಿ ಜೈ ಭಾರತ ಮಾತಾ ಸೇವಾ ಸಮಿತಿಯವರು ಗುಲ್ಬರ್ಗಾ, ಬೀದರ ಸೇರಿದಂತೆ ನಾಡಿನ ಅನೇಕ ಕಡೆ ತಮ್ಮ ಸುಮಾರು 5000 ಮಠಗಳಲ್ಲಿ ಕೊವಿಡ ಸೋಂಕಿತರಿಗೆ ಹಾಗೂ ಬಡವರಿಗೆ ಸಹಾಯಹಸ್ತ ಚಾಚಿದ್ದು, ತನಿಮಿತ್ಯ ನಾವು ಸಹ ನಮ್ಮ ಕೈಲಾದಮಟ್ಟಿಗೆ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ, ಸಹಾಯ ಹಸ್ತವನ್ನು ಚಾಚಿದ್ದೆವೆ ಎಂದರು.
ಈ ಸಂದರ್ಭದಲ್ಲಿ ನಗರದ ನಳಂದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಮೀನಾಕ್ಷಿ ಉಟಗಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.