ಸಂಕಷ್ಟದಲ್ಲಿ ಮಾವು ಬೆಳೆಗಾರರು

ಲಕ್ಷ್ಮೇಶ್ವರ, ಏ1 : ಈ ಬಾರಿ ರೈತರು ಮಾವಿನ ಗಿಡದಲ್ಲಿ ಹೂ ಮತ್ತು ಕಾಯಿ, ಇಲ್ಲದಿರುವುದರಿಂದ ಮಾವು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಈಗ ಇದರಿಂದಾಗಿ ಮಾವಿನಹಣ್ಣಿಗೆ ಭಾರಿ ಬೇಡಿಕೆ ಬರುವ ಸಾಧ್ಯತೆಯಿದ್ದು ರೈತರ ನಿರೀಕ್ಷೆ ಆಗಿದೆ. ಮಾವಿನ ಫಸಲಿನ ಇಳುವರಿ ಕುಂಠಿತವಾಗಲು ನವಂಬರ್ ಡಿಸೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆಯ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಿದೆ.
ಹವಾಮಾನ ವೈಪರಿತ್ಯ ಅಕಾಲಿಕ ಮಳೆ ಬೆಳೆಯ ಮೇಲೆ ಪರಿಣಾಮ ಬೀರಿದ್ದು ನವೆಂಬರ್ ಡಿಸೆಂಬರ್ ನಲ್ಲಿ ಹೂವು ಬಿಡಬೇಕಾಗಿದ್ದ ಗಿಡಗಳು ವಿಪರೀತವಾದ ತೇವಾಂಶದಿಂದಾಗಿ ಫಸಲು ಹಿನ್ನಡೆಗೆ ಕಾರಣವಾಗಿದೆ.
ತದನಂತರ ಗಿಡಗಳಿಗೆ ಅಂಟಿದ ಬೂದುರೋಗ ರಸ ಹೀರುವ ಕೀಟಗಳು ಅಳುದುಳಿದ ಹೂವುಗಳು ಮತ್ತು ಹೀಚುಗಳು ಹಾನಿಗೀಡಾಗಿ ಈಗ ಹೂವು ಮತ್ತು ಕಾಯಿ ಬಿಡುತ್ತಿವೆ.
ದೊಡ್ಡೂರು ರಸ್ತೆಯಲ್ಲಿನ ಹಾವೇರಿ ಮೂಲದ ಗಾಯವಾದಿಗಳು ಮತ್ತು ರೈತರು ಆದ ಅಶೋಕ ನೀರಲಿಗಿ ಅವರ 15 ಎಕರೆ ಮಾವಿನ ತೋಟದಲ್ಲಿ ಪ್ರತಿ ವರ್ಷ ನಿರೀಕ್ಷಿಸುತ್ತಿದ್ದ ಫಸಲು ಈ ಬಾರಿ ಕೈಗೆಟ್ಟಕದಿರುವದು ಕಳವಳಕ್ಕೆ ಕಾರಣವಾಗಿದೆ ಅವರು ಹೇಳುವಂತೆ ರೋಗ ಭಾದೆಯಿಂದ ಗಿಡಗಳು ನಿರೀಕ್ಷಿತ ಪ್ರಮಾಣದಲ್ಲಿ ಹೂ ಬಿಟ್ಟಿಲ್ಲ ಎಂದರು ಇದರಿಂದಾಗಿ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ ಎಂದರು.
ಈ ಕುರಿತಂತೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸುರೇಶ ಕುಂಬಾರವರು ಪ್ರತಿಕ್ರಿಯೆ ನೀಡಿ ನವಂಬರ್ ಡಿಸೆಂಬರ್ ಅಲ್ಲಿನ ಅಕಾಲಿಕ ಮಳೆ ಮಾವಿನ ಫಸಲಿನ ಮೇಲೆ ಪರಿಣಾಮ ಬೀರಿದ್ದು ಈ ಬಾರಿ ಇಳುವರಿ ಕಡಿಮೆಯಾಗಲಿದೆ ಎಂದರು.