ಸಂಕಷ್ಟದಲ್ಲಿ ಜನತೆಯ ನೆರವಿಗೆ ತಂದೆಯಂತೆ ಮಗ ಗೋವಿಂದರಾಜುಲು ರೇಷನ್ ಕಿಟ್ ವಿತರಣೆ

ಬಳ್ಳಾರಿ, ಮೇ.29: ಸಂಕಷ್ದಲ್ಲಿನ ಜನತೆಗೆ ಸದಾ ಸ್ಪಂದಿಸುವ ಗುಣ ಶರಣಂ ಅನ್ನದಾನ ಕೇಂದ್ರ ವ್ಯವಸ್ಥಾಪಕರ, ಶಿರಡಿ ಸಾಯಿ ಬಾಬಾ ಸೇವಾ ಟ್ರಸ್ಟ್‍ನ ಅಧ್ಯಕ್ಷ ಮತ್ತು ಮಾಜಿ ಕಾಪೊರೇಟರ್ ಎಗ್ ಕುಮಾರಸ್ವಾಮಿ ಅವರದು. ಅವರಂತೆ ಇತ್ತೀಚೆಗೆ ನಡೆದ ಪಾಲಿಕೆಯ ಚುನಾವಣೆಯಲ್ಲಿ 11 ವಾರ್ಡಿನಿಂದ ಬಿಜೆಪಿ ಕಾಪೊರೇಟರ್ ಆಗಿ ಆಯ್ಕೆಯಾಗಿರುವ ಎನ್.ಗೋವಿಂದರಾಜುಲು ಸಹ ತಂದೆ ಕುಮಾರಸ್ವಾಮಿ ಅವರಂತೆ ಸಂಕಷ್ದಲ್ಲಿನ ಜನರ ನೆರವಿಗೆ ಧಾವಿಸಿ ಬಂದಿದ್ದಾರೆ.
ಕುಮಾರಸ್ವಾಮಿ ಅವರು ಕಳೆದ ವರ್ಷ ಕೋವಿಡ್ ನ ಮೊದಲ ಅಲೆ ಸಂದರ್ಭದಲ್ಲಿ ಸಂಕಷ್ದಲ್ಲಿದ್ದ ಜನತೆಗೆ ಅಂದಾಜು 6 ಸಾವಿರ ಆಹಾರ ಧಾನ್ಯ, ದಿನಸಿಯ ಕಿಟ್‍ಗಳನ್ನು ಹಂಚಿದ್ದರು.
ಈಗ ಕೋವಿಡ್‍ನ ಎರಡನೇ ಅಲೆಯಿಂದ ಬಳ್ಳಾರಿಯಲ್ಲಿ ವಾರದಲ್ಲಿ ಐದು ದಿನ ಸಂಪೂರ್ಣ ಲಾಕ್‍ಡೌನ್ ಘೊಷಣೆ ಮಾಡಿದೆ. ಇದರಿಂದ ಜನತೆ ದುಡಿಮೆ ಇಲ್ಲದೆ. ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಅರಿತ ಗೋವಿಂದರಾಜುಲು ತಮ್ಮ 11 ನೇ ವಾರ್ಡಿನ ಎಲ್ಲಾ ಎಲ್ಲಾ ಕುಟುಂಬಗಳಿಗೆ ರೇಶನ್ ಕಿಟ್ಟುಗಳನ್ನು ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ವಾರ್ಡಿನ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು. ಕಾರ್ಯಕರ್ತರು ಇದ್ದರು.