
ಕೋಲಾರ ಮಾ.೧೫: ಪ್ರತಿ ಕೆ.ಜಿ ಆಲೂಗಡ್ಡೆಗೆ ೧೦ ರೂ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ಆಲೂಗಡ್ಡೆ ಬೆಳೆಗಾರರ ರಕ್ಷಣೆಗೆ ನಿಲ್ಲಬೇಕೆಂದು ರೈತ ಸಂಘದಿಂದ ಅಲೂಗಡ್ಡೆ ಸಮೇತ ತೋಟಗಾರಿಕೆ ಅಧಿಕಾರಿಗಳ ಮುಖಾಂತರ ತೋಟಗಾರಿಕೆ ಮಂತ್ರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ದುಬಾರಿ ಆಗಿರುವ ಬಿತ್ತನೆ ಆಲೂಗಡ್ಡೆ ರಸಗೊಬ್ಬರ ಕೀಟನಾಶಕ ಸೇರಿದಂತೆ ಒಂದು ಎಕರೆ ಆಲೂಗಡ್ಡೆ ಬೆಳೆಯಬೇಕಾದರೆ ೨ ಲಕ್ಷ ದಿಂದ ೩ ಲಕ್ಷದವರೆಗೆ ಬಂಡವಾಳ ಬೇಕಾಗುತ್ತದೆ. ಅಧಿಕ ಇಳುವರಿ ಬಂದು ಮಾರುಕಟ್ಟೆಯಲ್ಲಿ ಕನಿಷ್ಟ ೫೦ ಕೆ.ಜಿ ಚೀಲ ೧೫೦೦ ರೂ ಬೆಲೆ ಇದ್ದರೆ ರೈತರ ಬೆವರಿಗೆ ತಕ್ಕ ಲಾಭ ಸಿಗುತ್ತಿತ್ತು ಆದರೆ ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಸಿಗಬೇಕಾದ ಬೆಲೆ ದೀಡಿರ್ ಕುಸಿತದಿಂದ ರೈತ ಕಂಗಾಲಾಗಿದ್ದು, ಸರ್ಕಾರ ರೈತರ ನೆರವಿಗೆ ನಿಲ್ಲಬೇಕೆಂದು ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಒತ್ತಾಯಿಸಿದರು.
೨ವರ್ಷ ಸಾಂಕ್ರಾಮಿಕ ರೋಗ ಇನ್ನೇರೆಡು ವರ್ಷ ಮುಂಗಾರು ಮಳೆ ಆರ್ಭಟಕ್ಕೆ ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧಯವಾಗದ ರೀತಿ ತೇವಾಂಶ ಹೆಚ್ಚಾಗಿ ಅದರಲ್ಲೂ ಹಠ ಬಿಡದ ರೈತ ಪ್ರತಿ ಮೂಟೆ ಬಿತ್ತನೆ ಆಲೂಗಡ್ಡೆಗೆ ೯ ಸಾವಿರ ಗರಿಷ್ಠ ದಾಖಲೆಯ ಬೆಲೆ ನೀಡಿ ಬಿತ್ತನೆ ಮಾಡಿದ್ದ ಬೆಳೆ ಸಂಪೂರ್ಣವಾಗಿ ಅಂಗಮಾರಿ ರೋಗದಿಂದ ಗಡ್ಡೆ ಬರದೆ ಹಾಕಿದ ಬಂಡವಾಳ ಕೈಗೆ ಸಿಗದೆ ೪ ವರ್ಷಗಳಿಂದ ಸತತವಾಗಿ ನಷ್ಟದ ಹಾದಿಯಲ್ಲೇ ರೈತನ ಬದುಕು ಸಾಗುತ್ತಿದೆಂದು ಸರ್ಕಾರ ಮನವರಿಕೆ ಮಾಡಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಮೊದಲ ಹಂತದಲ್ಲಿ ಬಿತ್ತನೆ ಮಾಡಿದ ಅಲೂಗಡ್ಡೆ ಬೆಳೆ ಕಳಪೆ ಗುಣಮಟ್ಟದ ಬಿತ್ತನೆ ಆಲೂಗಡ್ಡೆಯಿಂದ ಕನಿಷ್ಠ ಎಕರೆಗೆ ೧೦ ಮೂಟೆ ಪಸಲು ಬರದೆ ಸಂಕಷ್ಟಕ್ಕೆ ತುತ್ತಾಗಿರುವ ಸಮಯದಲ್ಲಿ ಮತ್ತೆ ಚಲ ಬಿಡದೆ ಖಾಸಗಿ ಸಾಲ ಮಾಡಿ ಬೆಳೆದಿರುವ ಬೆಳೆ ಶೇ. ೮೦% ರಷ್ಟು ಪಸಲು ಬಂದಿದ್ದು, ಇನ್ನೇನು ನ್ನ ಬೆವರ ಹನಿಗೆ ತಕ್ಕ ಲಾಭ ಸಿಗುತ್ತದೆ ಎಂಬ ಆಸೆಯಲ್ಲಿದ್ದ ರೈತರಿಗೆ ಮಾರುಕಟ್ಟೆಯಲ್ಲಿ ದೀಡೀರನೆ ೧೪೦೦ ರೂ ಇದ್ದ ಆಲೂಗಡ್ಡೆ ಬೆಲೆ ೪೦೦-೫೦೦ ರೂ ಗೆ ಬಂದು ತಲುಪಿರುವುದರಿಂದ ಅದನ್ನೇ ನಂಬಿದ್ದ ರೈತ ಹಾಕಿದ ಬಂಡವಾಳ ಬಾರದೆ ಸರ್ಕಾರ ನಿಡುವ ಬೆಂಬಲ ಬೆಲೆಗಾಗಿ ಕಾದು ನೋಡುವ ಪರಿಸ್ಥಿತಿಯಲ್ಲಿದ್ದರು ರೈತರ ಸಮಸ್ಯೆ ಬಗ್ಗೆ ಗಂಬೀರವಾಗಿ ಪರಿಗಣಿಸುವಲ್ಲಿ ಅಧಿಕಾರಿಗಳು ವಿಪಲವಾಗಿದ್ದಾರೆಂದು ಆರೋಪ ಮಾಡಿದರು.
ಬೆಲೆ ಕುಸಿತದಿಂದ ಕಂಗಲಾಗಿ ಹಾಕಿರುವ ಲಕ್ಷಾಂತರ ರೂಪಾಯಿ ಬಂಡವಾಳ ಕೈ ಸುಟ್ಟುಕೊಂಡಿರುವ ಜಿಲ್ಲೆಯ ರೈತರ ರಕ್ಷಣೆಗೆ ಸರ್ಕಾರ ನೆರವಾಗಿ ಸಂಬಂದಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನ ತರಿಸಿಕೊಂಡು ಪ್ರತಿ ಕೆ,ಜಿ ಆಲೂಗಡ್ಡೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ನಿಲ್ಲಬೇಕೆಂದು ತೋಟಗಾರಿಕೆ ಸಚಿವರನ್ನು ಮನವಿ ಮೂಲಕ ಒತ್ತಾಯಿಸಿದರು
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಅಧಿಕಾರಿಗಳು ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಸುನಿಲ್‌ಕುಮಾರ್, ವಿಶ್ವ, ವಿಜಯ್‌ಪಾಲ್, ಅಂಬ್ಲಿಕಲ್ ಮಂಜುನಾಥ, ಯಾರಂಘಟ್ಟ ಗಿರೀಶ್, ಪದ್ಮಘಟ್ಟ ಧರ್ಮ, ಜುಬೇರ್‌ಪಾಷ, ಆದಿಲ್‌ಪಾಷ, ವೇಣು, ಹೆಬ್ಬಣ್ಣಿ ಆನಂದರೆಡ್ಡಿ ಸುಪ್ರಿಂ ಚಲ, ಗುರುಮೂರ್ತಿ ಸಂದಿಪ್‌ರೆಡ್ಡಿ, ಸಂದೀಪ್‌ಗೌಡ, ರಾಮಸಾಗರ ವೇಣು, ಮುಂತಾದವರು ಇದ್ದರು.