ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಗೌರವ ಧನ ನೀಡಿ

ಬೀದರ: ಜೂ.11:ಕೊವಿಡ್ 19 ಎರಡನೆ ಅಲೆ ನಿಮಿತ್ಯ ಸರ್ಕಾರ ವಿಧಿಸಿದ ಲಾಕಡೌನ ನಿಯಮ ಪಾಲಿಸಿಕೊಂಡು ಮನೆಯಲ್ಲಿ ಉಳಿದಿರುವ ಸರ್ಕಾರದ ಶಾಲಾ ಕಾಲೇಜು, ವಿದ್ಯಾಲಯಗಳಲ್ಲಿ ಗೌರವ ಶಿಕ್ಷಕರಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಬಾಕಿ ಉಳಿದಿರುವ ಗೌರವ ವೇತನ ನೀಡಬೇಕು ಎಂದು ವಿಶ್ವ ಕನ್ನಡಿಗರ ಸಂಸ್ಥೆ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿ, ಸಂಕಷ್ಟದಲ್ಲಿರುವ ಶಿಕ್ಷಕರು ಹಾಗೂ ಉಪನ್ಯಾಸಕರು ಬಾಡಿಗೆ ಮನೆಗಳಲ್ಲಿ ಉಳಿದುಕೊಂಡು ವೇತನವಿಲ್ಲದೆ ಉಪಜೀವನ ನಡೆಸುವುದು ಕಷ್ಟವಾಗುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಪದವಿ ಹಾಗೂ ಪಿ ಜಿ ಸೆಂಟರಗಳಲ್ಲಿ, ಐಟಿಐ ದಿಪ್ಲೋಮಾ, ಡಿ ಎಡ, ಬಿ,ಎಡ್, ಚಿತ್ರಕಲೆ, ಸಂಗೀತ, ಜಾನಪದ, ಇಂಜಿನಿಯರ, ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ. ಗೌರವ ಶಿಕ್ಷಕರ, ಉಪನ್ಯಾಸಕರ, ಜೀವನ ಕಷ್ಟದಲ್ಲಿದೆ. ರಾಜ್ಯದ ಮುಖ್ಯ ಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಈ ಕೂಡಲೆ ಸ್ಪಂದನೆ ಮಾಡಿ ಗೌರವ ಧನ ಕೊಡಬೇಕೆಂದು ಕರಕನಳ್ಳಿ ಮನವಿ ಮಾಡಿದ್ದಾರೆ.