ಸಂಕಷ್ಟದಲ್ಲಿರುವ ರೈತರಿಗೆ ದುಬಾರಿ ಬೆಲೆಗೆ ಬೀಜ ಮಾರಾಟ ಸಾಲಿಮನಿ ಆರೋಪ

ಶಹಾಪುರ:ಜೂ.4:ಕೊರೊನಾ ಸಮಯದಲ್ಲಿ ರೈತರು ತೀರಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು. ಇತ್ತ ಪರ್ಟಿಲೈಜರ್ ಅಂಗಡಿಗಳಲ್ಲಿ ಬೀಜ, ಗೊಬ್ಬರಗಳನ್ನು ಅಂಗಡಿ ಮಾಲಿಕರು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಬಹುಜನ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ರಾಯಪ್ಪ ಸಾಲಿಮನಿ ಆರೋಪಿಸಿದ್ದಾರೆ.

ಮುಂಗಾರು ಪ್ರವೇಶ ಮಾಡುತ್ತಿದ್ದಂತೆ ರೈತರು ತಮ್ಮ ಹೊಲದ್ದೆಗಳನ್ನು ಬಿತ್ತನೆ ಮಾಡಿಕೊಳ್ಳಲು ಜಮೀನು ಹದಗೊಳಿಸಿ ಸಜ್ಜಾಗಿದ್ದರೆ ಇತ್ತ ರಸಗೊಬ್ಬರ ಅಂಗಡಿಗಳಲ್ಲಿ ಬೀಜಗಳ ಬೆಲೆ ಗಗನಕ್ಕೇರಿದೆ. ನಗರದ ಪರ್ಟಿಲೈಜರ್ ಅಂಗಡಿಗಳ ಮುಂದೆ ರೈತರು ಮುಗಿಬಿದ್ದು ಬೀಜ ಗೊಬ್ಬರ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ. ಕೊವಿಡ್ ಕಷ್ಟದಲ್ಲೂ ಹೊಲ ಬಿತ್ತನೆ ಮಾಡಬೇಕು ಎಂದು ಮಾಹಾದಾಸೆ ಹೊತ್ತ ರೈತರಿಗೆ ದುಬಾರಿ ಬೇಲೆಗಳು ರೈತನಿಗೆ ಉರುಗೊಲಾಗಿವೆ. ಮೆಣಸಿನಕಾಯಿ ಬೀಜ ಸೀಜಂಟಾ ಕಂಪನಿಯಾಗಿದ್ದು 2043 ನಂಬರಿನ ಒಂದು ಪಾಕೇಟ ಈ ಬೀಜ ಮಾರಾಟದ ಬೇಲೆ 850 ಇದೆ. ಆದರೆ ಪ್ರಸ್ತುತ ರಸಗೊಬ್ಬರ ಅಂಗಡಿಗಳಲ್ಲಿ 1500 ರೂ.ಗಳಿಗೆ ಖರೀದಿ ಮಾಡಬೇಕಿದೆ. ನಿಗದಿತ ಬೇಲೆಗಿಂತ 750 ರೂ ಹೆಚ್ಚುವರಿಯಾಗಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಬೀಜ ರಸಗೊಬ್ಬರಗಳನ್ನು ಸರ್ಕಾರದ ನಿಗದಿತ ಬೇಲೆಯಲ್ಲಿ ಮಾರಾಟ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿ ರೈತರ ಹೀತ ಕಾಯಬೇಕು ಎಂದು ಅವರು ಆಗ್ರಹಿಸಿದರು.

ಜೊತೆಗೆ ನಕಲಿ ಬೀಜ ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕುರಿತು ಕೃಷಿ ಇಲಾಖೆ ತಂಡ ರಚಿಸಿ ತನಿಖೆ ಕಾರ್ಯ ಕೈಗೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯ ಮುಖಾಂತರ ಒತ್ತಾಯಿಸಿದರು.