ಸಂಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕೆ 112ಗೆ ಕರೆ ಮಾಡಿ

ಕಲಬುರಗಿ,ನ.21-ಸಂಕಸ್ಪದಲ್ಲಿರುವ ಮಕ್ಕಳಿಗೆ ಸಹಾಯ ಮಾಡಲು ಪೆÇಲೀಸ್ ಸಹಾಯವಾಣಿ 112 ನಂಬರಗೆ ಕರೆ ಮಾಡಿ, ದಿನದ 24 ಗಂಟೆಯೂ ಈ ಸಹಾಯವಾಣಿ ಮಕ್ಕಳ ರಕ್ಷಣೆಗೆ ಮುಂದಾಗಿರುತ್ತದೆ ಎಂದು ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್.ಐ. ಹುಸೇನ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, 1098 ಡಾನ್ ಬೋಸ್ಕೊ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಚೈಲ್ಡ್ ಲೈನ್ ಸೇ ದೋಸ್ತಿ ವೀಕ್ ಅಂಗವಾಗಿ “ಸೈಬರ್ ಸೇಫ್ಟಿ”
ಎಂಬ ವಿಷಯದೊಂದಿಗೆ ಬಬಲಾದ (ಎಸ್) ಗ್ರಾಮದ ಡಾನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಫಾ.ಟಾಮ್ ಚಿರಾಕಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಪೊಲೀಸ್ ಠಾಣೆಯ ಪಿ.ಎಸ್.ಐ.ನರ್ಮದಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮಬಾಯಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಭಾರತೇಶ ಶೀಲವಂತರ, ಫಾ. ಜಾನ್ ಮಕ್ಕಳ ಸಹಾಯವಾಣಿ 1098 ಡಾನ್ ಬೋಸ್ಕೊ ನಿರ್ದೇಶಕರಾದ ಅರುಣಾ, ನವನಾಥ ಸಿಂದೆ ಸರಕಾರಿ ನೌಕರರ ಸಂಘದ ಆದ್ಯಕ್ಷ ನವನಾಥ ಸಿಂಧೆ, ಮಕ್ಕಳ ಪ್ರತಿನಿದಿಗಳಾಗಿ ಸ್ಟೀವ್, ಕು. ಪಲ್ಲವಿ ಹಾಗೂ ಅರುಣ, ಹಾಗೂ ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಸೈಬರ್ ಕ್ರೈಮ್ ಪೆÇಲೀಸಠಾಣೆಯಿಂದ ಪ್ರಶಾಂತ ಹಾಗೂ ಸುಮೀತ. ಸಹ ಶಿಕ್ಷಕರು ಮಕ್ಕಳ ಹಕ್ಕುಗಳ ಜಾಗೃತಿ ಅಭಿಯಾನ ಸಂಯೋಜಕರು, ಸಿಬ್ಬಂದಿಗಳು, ಮಕ್ಕಳ ಸಹಾಯವಾಣಿ 1098 ಸಂಯೋಜಕರು ಹಾಗೂ ಸಿಬ್ಬಂದಿಗಳು ಹಾಗೂ ಮುದ್ದು ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ತತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಮಕ್ಕಳ ಸಹಾಯವಾಣಿ ಸದಸ್ಯರಾದ ಕು.ಆನುಸುಯ ಹುಲ್ಲೂರ, ಪ್ರಾರ್ಥನಾಗಿತೆ ಶಾಲೆಯ ಮುದ್ದು ಮಕ್ಕಳಾದ ರಾಜೇಶ್ವರಿ ಸಂಗಡಿಗರು ಹಾಡಿದರು. ಶಿವಕುಮಾÀುರ ಚನ್ನಾಯಕ್ ಸ್ವಾಗತಿಸಿದರು. ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಪ್ರಾಸ್ತಾವಿಕವಾಗಿ ಫಾ. ಟಾಮ್ ಚಿರಾಕಲ್ ರವರು ಮತನಾಡಿದರು, ಮಕ್ಕಳ ದಿನಾಚರಣೆಯ ಚೈಲ್ಡ ಲೈನ ಸೇ ದೋಸ್ತಿ ವೀಕ್ ಅಂಗವಾಗಿ ಸಪ್ತಾಹ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲೆಯಾದ್ಯಂತ ವಿವಿಧ ಶಾಲೆ ಹಾಗೂ ಸ್ಥಳಗಳನ್ನು ಆಯ್ಕೆಮಾಡಿ ಮಕ್ಕಳಿಗೆ ಕ್ರೀಡಾ ಸ್ಪರ್ಧೆಗಳೊಂದಿಗೆ ಹಾಗೂ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಸಹಾಯವಾಣಿ 1098 ನ ಕುರಿತು ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಘಟ್ಟವಾದ “ಸೈಬರ್ ಸೇಫ್ಟಿ” ವಿಷಯವನ್ನು ವಿಶೇಷ ಸಂಪನ್ಮೂಲ ವ್ಯಕ್ತಿಗಳಾದ ಸೈಬರ ಕ್ರೈಮ್ ಪೊಲೀಸ್ ಸಿಬ್ಬಂದಿಗಳಾದ ಪ್ರಶಾಂತ ಹಾಗೂ ಸುಮೀತ ಅವರು ಸೈಬರ್ ಸೇಫ್ಟಿ ಕುರಿತು ಸವಿಸ್ತಾರವಾಗಿ ಮಕ್ಕಳಿಗೆ ಜಾಗೃತಿ ಮೂಡಿಸಿದರು. ಮಕ್ಕಳ ಸಹಾಯವಾಣಿ 1098 ಸಂಯೋಜಕ ಮಲ್ಲಯ್ಯ ಎಸ್ ಗುತ್ತೆದಾರ ವಂದಿಸಿದರು.