ಸಂಕಷ್ಟದಲ್ಲಿರುವ ನಾಗರಿಕರು, ಇಎಂಐಗೆ ವಿನಾಯಿತಿ ನೀಡಲು ಮನವಿ

ದಾವಣಗೆರೆ.ಮೇ.೨೧;ರಾಜ್ಯ ಸರ್ಕಾರ 15 ದಿನಗಳ ಲಾಕ್ಡೌನ್ ಘೋಷಿಸಿರುವುದರಿಂದ ಸಾರ್ವಜನಿಕರು ದುಡಿಮೆಯಿಲ್ಲದೆ ಮನೆಯಲ್ಲಿ ಇರುವ ಪರಿಸ್ಥಿತಿ ಬಂದಿದೆ, ಆದ್ದರಿಂದ ಮನೆ, ವಾಹನ, ವೈಯಕ್ತಿಕ ಸಾಲದ ಇಎಂಐ ಕಟ್ಟಲು ರಿಯಾಯಿತಿ ನೀಡಬೇಕು, ಬ್ಯಾಂಕುಗಳು ಇಎಂಐ ಕಂತು ಕಟ್ಟದಿದ್ದರೆ ದಂಡ ಹಾಕುವುದಾಗಿ ಕರೆ ಮಾಡುತ್ತಿದ್ದು, ಸಾರ್ವಜನಿಕರು ಮೊದಲೇ ದುಡಿಮೆ ಇಲ್ಲದೆ ಜೀವನ ಸಾಗಿಸುತ್ತಿರುವಾಗ ಮತ್ತೆ ದಂಡ ಕಟ್ಟಬೇಕೇ ಎಂಬ ಭಯದಲ್ಲಿದ್ದಾರೆ, ಆದ್ದರಿಂದ ಸರ್ಕಾರ ಬ್ಯಾಂಕುಗಳಿಗೆ ಮುಂದಿನ ಮೂರು ತಿಂಗಳ ಇಎಂಐ ಗೆ ವಿನಾಯಿತಿ ನೀಡಲು ಆದೇಶಿಸಬೇಕು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ್ ಬಸಾಪುರ ವಿನಂತಿಸಿದ್ದಾರೆ.