ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ಸಾಂಸ್ಕøತಿಕ ಸಾಂತ್ವನ ಕೇಂದ್ರ ಸ್ಥಾಪಿಸಲು ಆಗ್ರಹ


ಧಾರವಾಡ ಮೇ.19- ಜಿಲ್ಲೆಯು ಕಲೆ, ಶಿಕ್ಷಣ ಹಾಗೂ ಸಾಂಸ್ಕತಿಕ ಕಲೆಗಳಿಂದಾಗಿ ಹಲವಾರು ವರ್ಷದಿಂದ ಅನೇಕ ಹಿರಿಯ, ಕಿರಿಯ ಕಲಾವಿದರು ಈ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ, ಲಾಕ್‍ಡಾನ್ ನಿಂದ ಕಲೆ ಪ್ರದರ್ಶನವಿಲ್ಲದೆ ಆರ್ಥಿಕವಾಗಿ ಹಾಗೂ ಸಾಮಾಜಿಕ ದುರ್ಬಲವಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯ ಹಲವಾರು ಕಲಾವಿದರು ಮನೆ ನಡೆಸುವುದೆ ಕಷ್ಟವಾಗಿದ್ದು ಸ್ವಾವಲಂಬಿಗಳಾದ ಕಲಾವಿದರ ಜೀವನವು ಅತಂತ್ರ ಸ್ಥಿತಿಯಲ್ಲಿದ್ದು ಸರ್ಕಾರವು ಈ ನಿಟ್ಟಿನಲ್ಲಿ ಗಮನ ಹರಿಸುವಂತಾಗಬೇಕು.
ಕೋವಿಡ್ ಎರಡನೇ ಅಲೆ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿ ಒಳಗಾಗಿರುವ ಸಂಗೀತ, ಗಾಯನ, ವಾದನ ನೃತ್ಯ, ನಾಟಕ, ಸಂಬಾಷಣೆ, ಏಕಪಾತ್ರಾಭಿನಯ, ಮಿಮಿಕ್ರಿ, ರಂಗಗೀತೆ, ಕಾವ್ಯ, ಪ್ರಸಾಧನ, ಚಿತ್ರಕಲೆ, ಚಲನಚಿತ್ರ, ರಂಗಭೂಮಿ, ಸೇರಿದಂತೆ ಇನ್ನಿತರ ಕ್ಷೇತ್ರದ ಕಲಾವಿದರಿಗೆ ಆರೋಗ್ಯ ತಪಾಸಣೆ ಹಾಗೂ ಸಾಂಸ್ಕøತಿಕ ಸಾಂತ್ವನ ಕೇಂದ್ರ ತೆರೆಯಬೇಕು. ಲಾಕ್‍ಡೌನ್ ಮತ್ತುಷ್ಟು ದಿನಗಳವರೆಗೆ ವಿಸ್ತರಿಸುವ ಸಾಧ್ಯತೆ ಇದ್ದು ಇಂತಹ ಸಂಧರ್ಭದಲ್ಲಿ ಕಲಾವಿದರು ತಮ್ಮ ಹಾಗೂ ಕುಟುಂಬದ ಜಬಾಬ್ಧಾರಿಯ ಜೊತೆಗೆ ಆರೋಗ್ಯವನ್ನು ಕಪಾಡಿಕೊಳ್ಳಬೇಕಾಗಿದೆ.
ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸಾಂಸ್ಕøತಿಕ ಸಾಂತ್ವನ ಕೇಂದ್ರ ಸ್ಥಾಪಿಸಿ, ಪಡಿತರ ವಿತರಣೆ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಕಲಾವಿದರ ದೃಡೀಕೃತ ದಾಖಲೆ ಪರಿಶೀಲಿಸಿ ಸೌಲಭ್ಯ ಕಲ್ಪಿಸಬೇಕು ಎಂದು ನಾದ ಝೇಂಕಾರ ಸಾಂಸ್ಕøತಿಕÀ ಸಂಘ, ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾಸಂಘ, ರಾಷ್ಟೀಯ ಮಕ್ಕಳ ಪ್ರತಿಭಾ ಕೇಂದ್ರ, ಅಖಿಲ ಕರ್ನಾಟಕ ಹವ್ಯಾಸಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘದ ಜಿಲ್ಲಾಘಟಕದ ಅಧ್ಯಕ್ಷರಾದ ಯಮನಪ್ಪ ಜಾಲಗಾರ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಾಜಿ ಸದಸ್ಯರಾದ ಕಲಾವಿದ ಸಂತೋಷ ಗಜಾನನ ಮಹಾಲೆ, ಸಾಹಿತಿ ಬಿ.ಬಿ.ಚಕ್ರಸಾಲಿ ಹಾಗೂ ರವಿ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.