ಸಂಕಷ್ಟದಲ್ಲಿರುವ ಕಲಾವಿದರನ್ನು ಸರಕಾರ ಕೈ ಹಿಡಿಯಬೇಕು

ಮಾದನಹಿಪ್ಪರಗಾ:ಜ.3:ಕಳೆದ ವರ್ಷ ಕೊರೊನಾದಿಂದಾಗಿ ಇಡಿ ದೇಶದ ಜನರು ಆರ್ಥಿಕವಾಗಿ ಸಂಕಷ್ಟ ಎದುರಿಸಿದ್ದಾರೆ ಅದರಲ್ಲಿ ಕಲಾವಿದರ ಬದುಕು ತಿರಾ ಸಂಕಷ್ಟಕ್ಕೆ ದೂಡಿದ್ದು ಬಡ ಕಲಾವಿದರನ್ನು ಸರಕಾರ ಸಹಾಯಧನ ನೀಡಿ ಕೈ ಹಿಡಿಯಬೇಕು ಎಂದು ಗುರುಶಾಂತೇಶ್ವರ ಹಿರೇಮಠದ ಪೀಠಾಧಿಪತಿ ಶ್ರೀಶಾಂತವೀರ ಶಿವಾಚಾರ್ಯರರು ಹೇಳಿದರು.
ಆಳಂದ ತಾಲೂಕಿನ ಮಾದನ ಹಿಪ್ಪರಗಾದ ಗುರುಶಾಂತೇಶ್ವರ ಹಿರೇಮಠದಲ್ಲಿ ಶ್ರೀ ಮಹಾತ್ಮ ಜ್ಯೋತಿಬಾ ಫುಲೆ ನಾಟಕ ಬೈಲಾಟ ಹಾಗೂ ಜಾನಪದ ಕಲಾ ಸಂಘ ಇವರ ವತಿಯಿಂದ ಸಂಗೀತ ಸಂಜೆ 2021ರ ಸಾಂಸ್ಕøತಿಕ ಕಾರ್ಯಕ್ರಮದ ಸಾನಿದ್ಯ ವಹಿಸಿ ಅವರು ಮಾತನಾಡಿ ಮಹಾತ್ಮ ಜ್ಯೋತಿಬಾಪುಲೆ ನಾಟಕ ಬೈಲಾಟ ಹಾಗೂ ಜಾನಪದ ಕಲಾ ಸಂಘದವರು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದಾರೆ ಮಾದನ ಹಿಪ್ಪರಗಿ ಯಲ್ಲಿ ಅಷ್ಟೇ ಅಲ್ಲ ಅನೇಕ ಗ್ರಾಮಗಳಲ್ಲಿ ನಾಟಕ ಬೈಲಾಟ ಗಳನ್ನು ಮಾಡುತ್ತಾ ಜನರ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ ಹೀಗೆ ಬೆಳೆದು ಮುಂದೆ ಕಲಾವಿದರಿಗೆ ಈ ಕಲಾ ಸಂಘವು ನೆರವಾಗಬೇಕು ಎಂದರು. ಗುರುಶಾಂತೇಶ್ವರ ಹಿರೇಮಠದ ಅರ್ಚಕರಾದ ವಿಶ್ವನಾಥ್ ಬೊಮ್ಮಯ್ಯ ಹಿರೇಮಠ್ ಉದ್ಘಾಟಿಸಿದರು. ಚಲಗೇರಾ ಗ್ರಾಮದ ಅಡವೆಪ್ಪ ಈರಯ್ಯ ಸ್ಥಾವರಮಠ ಅಧ್ಯಕ್ಷತೆವಹಿಸಿದರು ಮುಖ್ಯ ಅತಿಥಿಗಳಾಗಿ ಶಾಂತಮಲ್ಲಪ್ಪ ಕಬಡಗಿ ಸೋಮನಾಥ್ ಕವಲಗಿ ಬಸವರಾಜ್ ಮಲ್ಲಪ್ಪ ಓನಮ್ ಶೆಟ್ಟಿ ಹಾಗೂ ಮಲ್ಲಿನಾಥ್ ಕಲ್ಯಾಣಿ ಸಕ್ಕರೆ ಭಾಗವಹಿಸಿದರು ಕಲಾವಿದರಾಗಿ ಗುರುಶಾಂತಪ್ಪ ಕುಂಬಾರ್ ವಚನ ಗಾಯನ ಹಾಡಿದರು ಮಹಾಂತಯ್ಯ ಸ್ವಾಮಿ ತತ್ವಪದಗಳನ್ನು ಹಾಡಿದರು ಪ್ರಶಸ್ತಿ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಭೀಮಶಾ ಬಕರೆ ಸಿದ್ಧಾರೂಢ ಶೆಟ್ಟಿ ಬೋಳಶೆಟ್ಟಿ ಮಲ್ಲಪ್ಪ ಪೇಟೆ ಶಿವಲಿಂಗಪ್ಪ ಕೊಳ ಶೆಟ್ಟಿ ಬಸವರಾಜ್ ಭಟ್ಟರ ಕಿ ಪರಮೇಶ್ವರ ಭಜನಾ ಮಂಡಳಿ ಸಾಕಿನ ಕನ್ನಳ್ಳಿ ಭಜರಂಗಬಲಿ ಭಜನಾ ಮಂಡಳಿ ಚಲಗೇರಾ ಮಲ್ಲಿಕಾರ್ಜುನ್ ಭಜನಾ ಮಂಡಳಿ ಭೋಸ್ಗ ಮಹಾರಾಷ್ಟ್ರ ಚಂದ್ರಕಾಂತ್ ಮಲ್ಲಾಬಾದಿ ಚಂದ್ರಕಾಂತ ಹೊಸಳ್ಳಿ ಬಾಸ್ ಗೆ ಬಸವರಾಜ್ ಓನಾಮ ಶೆಟ್ಟಿ ಸಿದ್ದಲಿಂಗ ಕೊಳ ಶೆಟ್ಟಿ ಇನ್ನೂ ಅನೇಕ ಕಲಾವಿದರು ಭಾಗವಹಿಸಿದ್ದರು ರಾಜಕುಮಾರ್ ಮಾಡ್ಯಾಳ ಮಲ್ಲಪ್ಪ ಪೇಟೆ ಶಿವಲಿಂಗಪ್ಪ ಕೊಳ ಶೆಟ್ಟಿ ಸಿದ್ಧಾರೂಢ ಕೊಳ ಶೆಟ್ಟಿ ಸಂಗಣ್ಣ ಕೊಳ ಶೆಟ್ಟಿ ಮಹಾತ್ಮ ಜ್ಯೋತಿಬಾಪುಲೆ ಕಲಾತಂಡದ ಕಾರ್ಯದರ್ಶಿ ಬಸವರಾಜ ಪ್ಯಾಟಿ ನಿರೂಪಿಸಿ ಒಂದಿಸಿದರು.