ಸಂಕಷ್ಟದಲ್ಲಿರುವವರಿಗೆ ಆಹಾರ ಕಿಟ್ ವಿತರಣೆ

?????????

ಧಾರವಾಡ ಜೂ.11-ಕೊರೋನಾ ಎರಡನೇ ಅಲೆಯಿಂದ ನಾಡಿಗೆ ನಾಡೇ ತತ್ತರಿಸಿ ಹೊಗಿದೆ ಈ ನಿಟ್ಟಿನಲ್ಲಿ ಧಾರವಾಡದ ಸಮುದಾಯ ತಂಡದ ವತಿಯಿಂದ ಇಂದು ರಂಗಾಯಣದ ಆವರಣದಲ್ಲಿ ಸಂಕಷ್ಟದಲ್ಲಿರುವ ಕಲಾವಿದರಿಗೆ, ಪೌರಕಾರ್ಮಿಕರಿಗೆ ಹಾಗು ಶ್ರಮಿಕರಿಗೆ ಆಹಾರ ಧಾನ್ಯದ ದಿನಸಿ ಕಿಟ್‍ನ್ನು ಡಾ. ಗಿರೀಶ ಕಾರ್ನಾಡ ಪುಣ್ಯ ತಿಥಿಯ ಸ್ಮರಣಾಥರ್À ವಿತರಿಸಲಾಯಿತು.
ಹಿರಿಯ ಕಲಾವಿದರು ಹಾಗು ಗಾಂಧಿ ಅಧ್ಯಯ ಪೀಠದ ಮುಖ್ಯಸ್ಥರಾದ ಡಾ. ಶಿವಾನಂದ ಶೆಟ್ಟರ ಆಗಮಿಸಿ ದಿನಸಿ ವಿತರಿಸಿ ಮಾತನಾಡಿ ಇಂದು ಸಾಂಸ್ಕøತಿಕ ಸಂಘಟನೆಗಳು ಸಾಂಸ್ಕøತಿಕ ಕಾರ್ಯಕ್ರಮಗಳಿಲ್ಲದೆ ಕಂಗೆಟ್ಟು ಹೊಗಿವೆ ಅದರಲ್ಲಿಯೂ ಕಲಾವಿದರು ತಮ್ಮ ಜೀವನವೆ ಅದರಲ್ಲಿ ಕಳೆದಿದ್ದು ಕಷ್ಟಮಯವಾಗಿ ತಮ್ಮ ದಿನನಿತ್ಯದ ಜೀವನವನ್ನು ಸಾಗಿಸುತ್ತಿದ್ದು ಇಂದು ಕಾಣುತ್ತಿದ್ದೇವೆ ಜೀವನವನ್ನೇ ಪಣಕ್ಕಿಟ್ಟು ಸ್ವಚ್ಛತಾ ಕಾರ್ಯ ಮಾಡುತ್ತಿರುವ ಪೌರ ಕಾರ್ಮಿಕರ ಕಾರ್ಯ ದೊಡ್ಡದು ಅದರಂತೆ ಸಮುದಾಯ ಹಲವಾರು ವರ್ಷಗಳಿಂದ ಇಂತಂಹ ಬಡ ಕಲಾವಿದರಿಗಾಗಿ ಹಾಗೂ ಶ್ರಮಿಕ ಕಾರ್ಮಿಕರಿಗಾಗಿ ಒಂದಿಲ್ಲಾ ಒಂದು ರೀತಿಯಲ್ಲಿ ಸಹಾಯ ಹಸ್ತವನ್ನು ನೀಡುತ್ತಿರುವುದು ಶ್ಲ್ಯಾಘನೀಯವೆಂದು ನುಡಿದರು.
ಹಿರಿಯ ಪ್ರಸಾಧನ ಕಲಾವಿದ ಸಂತೋಷ ಗಜಾನನ ಮಹಾಲೆ ಮಾತನಾಡಿ ಕಲೆಗಾಗಿ ಕಲೆ ಅಲ್ಲ ಬದುಕಿಗಾಗಿ ಕಲೆ ಎಂಬ ತತ್ವದಡಿಯಲ್ಲಿ ಸಾಗುತಿದ್ದ ಈ ಸಮುದಾಯ ಕಲಾವಿದರಿಗೆ ಹಾಗು ಪೌರಕಾರ್ಮಿಕರಿಗೆ ಮತ್ತು ಶ್ರಮಿಕ ಕಾರ್ಮಿಕರಿಗೆ ಈ ಒಂದು ಕಿಟ್ ನೀಡುತ್ತಿರುವುದು ಶ್ಲಾಂಘನೀಯವಾಗಿದ್ದು ಇಂದು ಪ್ರತಿಯೊಬ್ಬ ಬಡ ಕಲಾವಿದರಾಗಲಿ ಶ್ರಮೀಕರಾಗಲಿ ತಮ್ಮ ಜೀವನವನ್ನು ನಡೆಸುವುದೆ ಕಷ್ಟವಾಗುತ್ತಿದೆ ಅದರಲ್ಲಿ ಮನೆ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಕರ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರುಸುತ್ತಿದ್ದು ಕೆಲವರು ಅನಾರೊಗ್ಯದಿಂದ ಆಸ್ಪತ್ರೆ ಖರ್ಚು ಹಾಗೂ ಔಷದೊಪಚಾರಕ್ಕಾಗಿ ಖರ್ಚು ಹೊತ್ತು ಜೀವನ ನಡೆಸುವುದೆ ಕಷ್ಟವಾಗುತ್ತಿದೆ ಇಂತಂಹ ಸಂಧರ್ಭದಲ್ಲಿ ನಮ್ಮನ್ನು ನಾವು ರಕ್ಷಿಸುದರ ಮೂಲಕ ಕುಟುಂಬ ಸಮಾಜವನ್ನು ಸಾಕಿ ಸಲುಹಬೇಕಾಗಿದೆ ಈ ನಿಟ್ಟಿನಲ್ಲಿ ಸಮುದಾಯ ಕಲಾವಿದರನ್ನು ಹಾಗೂ ಶ್ರಮಿಕ ಕಾರ್ಮಿಕರನ್ನು ಗುರುತಿಸಿ ಅವರಿಗೆ ದಿನಸಿ ಕಿಟ್ ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯವೆಂದು ನುಡಿದರು.
ಇನ್ನೊರ್ವ ಹಿರಿಯ ಕಲಾವಿದ ಅನಂತ ದೇಶಪಾಂಡೆ ಮಾತನಾಡಿ ಇಂದು ನಮ್ಮ ಜೀವನ ಎಲ್ಲಿಯವರೆಗೆ ಮುಟ್ಟುತ್ತದೆ ಎಂದು ಹೇಳಲಾಗದು ಈ ಕರೋನಾ ಮಹಾಮಾರಿಯಿಂದ ದಿನನಿತ್ಯದ ಚಟುವಟಿಕೆಗಳು ನಿಂತು ಬದುಕು ಕಷ್ಟವಾಗುತ್ತಿದೆ ಈನಿಟ್ಟಿನಲ್ಲಿ ಸಮುದಾಯ ನಮ್ಮಂತಹ ಕಲಾವಿದರನ್ನು ಕರೆದು ಈ ಕಿಟ್ ನೀಡಿದ್ದು ನಮಗೆ ಒಂದು ಆತ್ಮಸ್ಥೈರ್ಯ ಬಂದಂತೆ ಎಂದು ನುಡಿದರು.
ಜೋಸೆಫ್ ಮಲ್ಲಾಡಿ ಕಾರ್ಯಕ್ರಮವನ್ನು ನಿರೂಪಿಸಿ ನಿಜವಾದ ಹಾಗೂ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಬಡ ಕಲಾವಿದರು, ಶ್ರಮಿಕ ಕಾರ್ಮಿಕರು ಹೀಗೆ ಒಟ್ಟು ಐವತ್ತು ಜನರನ್ನು ಗುರುತಿಸಿ ಕಿಟ್ ನೀಡುತ್ತಿರುವುದಾಗಿ ಹಾಗೂ ಮುಂಬರುವ ದಿನಗಳಲ್ಲಿ ಮತ್ತಷ್ಟು ಬಡ ಕಲಾವಿದರನ್ನು ಗುರುತಿಸಿ ಅವರಿಗೂ ಸಹ ಕಿಟ್ ವಿತರಿಸುವುದರ ಬಗ್ಗೆ ಕ್ರೀಯಾಯೋಜನೆ ಸಿದ್ದಪಡಿಸುವದಾಗಿ ನುಡಿದರು.
ಭೀಮಸೇನ ಕಾಗಿ ಸಮುದಾಯದ ಕುರಿತು ಪ್ರಾಸ್ತಾವಿಕ ಮಾತನಾಡಿದರೆ. ಭೀಮು ಕಠಾವಿ ವಂದಿಸಿದರು. ಈ ಸಂಧರ್ಭದಲ್ಲಿ ಸಮುದಾಯದ ಕಾರ್ಯಕರ್ತರಾದ ವಿಲಾಸ ಶೇರಖಾನ, ಈರಣ್ಣ ಐನಾಪುರ, ಹಿರಿಯ ರಂಗಭೂಮಿ ಕಲಾವಿದ ಗೋಪಾಲ ಉಣಕಲ್ ಮುಂತಾದವರು ಉಪಸ್ಥಿತರಿದ್ದರು.