ಸಂಕಷ್ಟದಲ್ಲಿದ್ದ ೫೦೦ ಕುಟುಂಬಗಳಿಗೆ ಹಾಲು ವಿತರಣೆ

ದಾವಣಗೆರೆ. ಜೂ.೧೦;ಅಖಿಲ ಕರ್ನಾಟಕ ಜಾತ್ಯಾತೀತ ನಿಖಿಲ್ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಯುವ ಒಕ್ಕೂಟದಿಂದ  ಲಾಕ್‌ಡೌನ್ ಪ್ರಯುಕ್ತ ಸಂಕಷ್ಟದಲ್ಲಿರುವವರಿಗೆ, ಕಾರ್ಯನಿರತ ಆಶಾ ಕಾರ್ಯಕರ್ತೆಯರಿಗೆ,ಆರೋಗ್ಯ ಇಲಾಖೆಯವರಿಗೆ ಹಾಗೂ ಕಾರ್ಯನಿರತ ಪೊಲೀಸ್ ಸಿಬ್ಬಂದಿಯವರಿಗೆ, ದಲಿತ ಕುಟುಂಬದವರಿಗೆ ಹಾಲು ವಿತರಣೆ ಮಾಡಲಾಯಿತು. ಹಾಗೂ ತರಕಾರಿಯನ್ನು 500 ಬಡ ಕುಟುಂಬಗಳಿಗೆ ವಿತರಿಸಲಾಯಿತು. ಆಹಾರ ಮತ್ತು ಹಾಲು ವಿತರಿಸಲು ಪೊಲೀಸ್ ಇಲಾಖೆಯಿಂದ 2 ಆಟೋರಿಕ್ಷಾಗಳಿಗೆ ಅನುಮತಿ ಪಡೆಯಲಾಗಿತ್ತು. ಈ ವೇಳೆ   ಕಿರಣ್‌ಕುಮಾರ್ , ಶಿಲ್ಪ ಕಿರಣ್‌ಕುಮಾರ್ ಹುಲ್ಲುಮನಿ,  ಜೀವನ್,  ಠಾಕೂರ್ ಸಿಂಗ್, ಮಂಜುನಾಥ್, ರಾಜು, ಮಧು ಇದ್ದರು.