ಸಂಕಷ್ಟಕ್ಕೆ ಸಿಲುಕಿದ ಪರ್ವತಾರೋಹಿ

ಇಸ್ಲಾಮಾಬಾದ್, ಜು. ೪-೮,೧೨೬ ಮೀಟರ್ ಎತ್ತರದ, ವಿಶ್ವದ ಒಂಬತ್ತನೇ ಅತಿ ಎತ್ತರದ ನಂಗಾ ಪರ್ವತದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಸಿಪಿ ಸೆಕ್ರೆಟರಿ ಜನರಲ್ ಕಾರ್ ಹೈದ್ರಿ ಪ್ರಕಾರ ಭಟ್ಟಿ ಅವರು ೭,೫೦೦-೮,೦೦೦ ಮೀಟರ್ ಎತ್ತರದಲ್ಲಿರುವ ಶಿಬಿರ ೪ ರಲ್ಲಿ ಹಿಮ ಕುರುಡುತನದಿಂದ ಸಿಲುಕಿಕೊಂಡಿದ್ದು ಅವರಿಗೆ ಸಹಾಯದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇಸ್ಲಾಮಾಬಾದ್‌ನ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿರುವ ಭಟ್ಟಿ ಅವರು ಪರ್ವಾತಾರೋಹಣದ ಅಂತಿಮ ಚರಣದಲ್ಲಿದ್ದಾಗ ಹಿಮ ಕುರುಡುತನಕ್ಕೆ ಬಲಿಯಾಗಿದ್ದಾರೆ .
ಹೈದ್ರಿ ಪ್ರಕಾರ, ಹಲವು ಪರ್ವಾತಾರೋಹಿಗಳು ಪರ್ವತಾರೋಹಣ ಉತ್ತುಂಗವನ್ನು ತಲುಪಲು ಪ್ರಯತ್ನಿಸುತ್ತಿದ್ದು ಕೆಲವು ಸದಸ್ಯರು ಭಟ್ಟಿ ಹಿಮ ಕುರುಡುತನದಿಂದ ಬಳಲುತ್ತಿದ್ದಾರೆ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದಿದ್ದಾರೆ.
ಭಟ್ಟಿ ಅವರನ್ನು ಕರೆದೊಯ್ಯಲು ಹೆಲಿಕಾಪ್ಟರ್ ಅಗತ್ಯವಿದೆ ಆದರೆ ಅದಕ್ಕಾಗಿ ಅವರು ಸುಮಾರು ೬,೦೦೦- ೬,೫೦೦ ಮೀ ಎತ್ತರಕ್ಕೆ ಬರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಭಟ್ಟಿ, ಇತರ ಪರ್ವತಾರೋಹಿಗಳಾದ ಲೆಫ್ಟಿನೆಂಟ್ ಕರ್ನಲ್ ಡಾ ಜಬ್ಬಾರ್, ಡಾ ನವೀದ್, ಸಾದ್ ಮುಹಮ್ಮದ್ ಮತ್ತು ಫಹೀಮ್ ಪಾಷಾ ಅವರೊಂದಿಗೆ ಕೆಲವು ದಿನಗಳ ಹಿಂದೆ ಪರ್ವಾತಾರೋಹಣಕ್ಕೆ ತೆರಳಿದ್ದರು.
ಪಾಕಿಸ್ತಾನದಲ್ಲಿ ಸಾಹಸ ಪ್ರವಾಸೋದ್ಯಮಕ್ಕಾಗಿ ಕೆಲಸ ಮಾಡುವ ಸಂಸ್ಥೆಯಾದ ಕಾರಕೋರಂ ಕ್ಲಬ್, ಶಿಂಶಾಲ್‌ನ ಕಾರಕೋರಂ ಎಕ್ಸ್‌ಪೆಡಿಶನ್‌ನ ಆರೋಹಿಗಳ ಗುಂಪು ಭಟ್ಟಿಯ ಕ್ಷಣಾ ಕಾರ್ಯಾಚರಣೆಗೆ ಸಿದ್ದತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ವಿಶ್ವದ ಐದು ಅತ್ಯಂತ ಅಪಾಯಕಾರಿ ಪರ್ವತಗಳಲ್ಲಿ ನಂಗಾ ಬರ್ಪತ್ ಒಂದು. ಇಲ್ಲಿಯವರೆಗೆ, ಶಿಖರವನ್ನು ಏರಲು ಪ್ರಯತ್ನಿಸುವಾಗ ೮೫ ಆರೋಹಿಗಳು ಸಾವನ್ನಪ್ಪಿದ್ದಾರೆ ಹೀಗಾಗಿ ಅದನ್ನು ಕಿಲ್ಲರ್ ಮೌಂಟೇನ್ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ.