ಸಂಕಲ್ಪ ಸೇವಾ ಸಂಸ್ಥೆ-ಗಾಂಧಿ ಜಯಂತಿ ಆಚರಣೆ

ರಾಯಚೂರು.ಸೆ.೦೩- ಸಂಕಲ್ಪ ಸೇವಾ ಸಂಸ್ಥೆ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜಯಂತಿ ಆಚರಣೆ ಮಾಡಲಾಯಿತು.
ಅತ್ಯಂತ ಸಂಭ್ರಮದಿಂದ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಕೆ.ಭೀಮರೆಡ್ಡಿ ಅವರು ಮಾತನಾಡುತ್ತಾ, ಮಹಾತ್ಮ ಗಾಂಧೀಜಿ ಅವರ ಅಂಹಿಸಾ ಸರ್ವಕಾಲಿಕ ಶ್ರೇಷ್ಠ ಅವರ ಮಾರ್ಗದರ್ಶನ ಆದರ್ಶವಾಗಬೇಕು ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ, ಸಿಇಓ ಶಂಕರಪ್ಪ ಮಲ್ಲಾಪುರು, ಲೇಖಾಬಿ ಎಮ್ ಮತ್ತು ಸಂಸ್ಥೆಯ ಸಿಬ್ಬಂದಿಗಳಾದ ಅಕ್ತರ್, ತಬಸ್ಸುಮ್, ಪೂಜಾ ಇತರರು ಇದ್ದರು.