ಸಂಕಲ್ಪ ಸಪ್ತಾಹ-ಕೃಷಿ ಮಹೋತ್ಸವ ಕಾರ್ಯಕ್ರಮ

ಸಿರವಾರ.ಅ೦.೬- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಸಂಕಲ್ಪ ಸಪ್ತಾಹ ಯೋಜನೆ’ಯ ಅಡಿಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಆರೋಗ್ಯ, ಶಿಕ್ಷಣ ಹಾಗೂ ಕೃಷಿಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತಾಲೂಕನ್ನು ಅಭಿವೃದ್ಧಿ ಪಡಿಸುವ ಯೋಜನೆ ಇದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್ ಹೇಳಿದರು.
ಪಟ್ಟಣದ ಸಜ್ಜಲಶ್ರೀ ಆಶ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ರಾಯಚೂರು, ತಾಲೂಕು ಪಂಚಾಯತ ಸಿರವಾರ, ಮತ್ತು ಕೃಷಿ ಇಲಾಖೆ ಸಿರವಾರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದ ಘೋಷಣೆ ಹಿನ್ನೆಲೆಯಲ್ಲಿ ‘ಸಂಕಲ್ಪ ಸಪ್ತಾಹ -ಕೃಷಿ ಮಹೋತ್ಸವ’ ದಲ್ಲಿ ಮಾತನಾಡಿದರು.
ರೈತರ ಸರ್ವತೋಮುಖ ಬೆಳವಣಿಗೆಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು. ಕೃಷಿ ವಿಜ್ಞಾನಿ ಡಾ.ಟಿ.ವೀಣಾ, ಡಾ.ಉಮೇಶ ಹಾಗು ಸಹಾಯಕ ಪ್ರಾಧ್ಯಾಪಕ ಲೋಕೇಶ, ಸಹಾಯಕ ಕೃಷಿ ನಿರ್ದೇಶಕ ಬಿ.ಹುಸೇನ ಸಾಬ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ರಾಜು ಕಾಂಬ್ಳೆ, ಕೃಷಿ ಅಧಿಕಾರಿ ಅಯ್ಯನಗೌಡ ಏರಡ್ಡಿ, ಜೆ.ಶರಣಪ್ಪಗೌಡ, ನೀಲಗಲ್ ಪಂಪಣ್ಣ ಸಾಹುಕಾರ, ಎನ್ ಉದಯಕುಮಾರ, ಬಸ್ಸಪ್ಪಗೌಡ ನಂದರಡ್ಡಿ, ಜಿ.ಲೋಕರಡ್ಡಿ, ವಿರುಪಾಕ್ಷಪ್ಪ ಗೌಡ ಚಾಗಭಾವಿ, ಎಸ್ ದಾನನಗೌಡ, ಎಂ.ನಾಗರಾಜ ಗೌಡ, ಜಿ.ವೀರೇಶ, ಎಚ್ ಶರಣಪ್ಪ, ವೈ.ಶ್ರೀನಿವಾಸ, ಎಚ್ ಕೆ ಅಮರೇಶ, ರಾಜಕುಮಾರ ಕಡದಿನ್ನಿ, ಕಲ್ಲೂರು ಬಸವರಾಜ ನಾಯಕ, ದೆವೇಂದ್ರಯ್ಯ ಸ್ವಾಮಿ, ಚನ್ನಬಸವ ಕುಂಬಾರ, ಮುಕ್ಕಣ್ಣಾಳ ಯಲ್ಲಪ್ಪ, ದೇವಪುತ್ರಪ್ಪ, ಶರಣಬಸವ ಮರಾಟ, ಬಡ್ಡ ಹನುಮಂತ, ಅಮರಯ್ಯ ಸ್ವಾಮಿ ಗಣದಿನ್ನಿ,
ಮಲ್ಲಪ್ಪ ಕಜ್ಜಿ, ಹಾಗು ಚಾಗಭಾವಿ, ಜಂಬಲದಿನ್ನಿ, ಜಕ್ಕಲದಿನ್ನಿ, ಜಾಲಾಪೂರ ಸೇರಿದಂತೆ ವಿವಿಧ ಗ್ರಾಮಗಳಿಂದ ರೈತರು ಭಾಗವಹಿಸಿದ್ದರು.