ಸಂಕಟದಲ್ಲಿ ಸಹಕರಿಸುವುದೇ ಮಾನವನ ನೈಜ ಗುಣ

ಭಾಲ್ಕಿ:ಮೇ.31: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಸಹಕರಿಸುವುದು ಮಾನವನ ನೈಜ ಗುಣವಾಗಿದೆ ಎಂದು ಡಿಎಸ್‍ಪಿ ಡಾ.ದೇವರಾಜ ಬಿ. ಹೇಳಿದರು.
ಇಲ್ಲಿನ ಬಾಲಾಜಿ ಮಂದಿರದಲ್ಲಿ ರೋಟರಿ ಕ್ಲಬ್ ವತಿಯಿಂದ ಭಾನುವಾರ ಆಯೋಜಿಸಿದ ತಾಲೂಕಿನ ಸವಿತಾ(ನಾವಿ) ಸಮುದಾಯದವರಿಗೆ ಆಹಾರ ಕಿಟ್,ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಲಾಕ್‍ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ,ಎಲ್ಲರೂ ತಪ್ಪದೆ ವ್ಯಾಕ್ಸಿನ ಹಾಕಿಸಿಕೊಳ್ಳಬೇಕು.ಕೋವಿಡ್ ಸಮಯದಲ್ಲಿ ಬಡವರಿಗೆ,ದಿನ ಕೂಲಿಕಾರ್ಮಿಕರಿಗೆ ತಮ್ಮ ನಿತ್ಯದ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ಅಂಥವರಿಗೆ ವಿವಿಧ ಸಂಘ-ಸಂಸ್ಥೆಗಳು ತಮ್ಮ ಸಹಾಯಹಸ್ತ ಚಾಚಬೇಕು.ವಿವಿಧ ಕ್ಷೇತ್ರಗಳಲ್ಲಿ ಸಮಾಜಪಯೋಗಿ ಕಾರ್ಯಗಳನ್ನು ಮಾಡುತ್ತಿರುವ ರೋಟರಿ ಕ್ಲಬ್‍ನವರು ಸವಿತಾ ಸಮುದಾಯದವರಿಗೆ ಆಹಾರದ ಕಿಟ್ ಜೊತೆಗೆ ಇತರೆ ಉಪಯುಕ್ತ ಸರಕು ನೀಡುವ ಮೂಲಕ ಬಡವರ ನೆರವಿಗೆ ಮುಂದೆ ಬಂದಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಡಾ.ಯುವರಾಜ ಜಾಧವ, ಕೋಶಾಧ್ಯಕ್ಷ ಡಾ.ವಸಂತ ಪವಾರ, ಕಾರ್ಯದರ್ಶಿ ನ್ಯಾಯವಾದಿ ಸಾಗರ ನಾಯಕ ಮತ್ತು ರೋಟರಿಯನರಾದ ಡಾ.ಅಮೀತ ಅಷ್ಟೂರೆ,ಡಾ.ಸಂತೋಷ ಕಾಳೆ, ಡಾ.ಅನೀಲ ಸುಕಾಳೆ,ಯೋಗೇಶ ಅಷ್ಟೂರೆ, ಜೈಕಿಶನ್ ಬಿಯಾಣಿ,ಉಮಾಕಾಂತ ವಾರದ,ಅಶೋಕ ರಾಜೋಳೆ,ಶಾಂತವೀರ ಸಿರ್ಗಾಪುರೆ,ಡಾ.ಧನರಾಜ ಹುಲಸೂರೆ,ದತ್ತುಕುಮಾರ ಮೇಹಕರೆ,ಸವಿತಾ ಸಮಾಜ ತಾಲೂಕು ಅಧ್ಯಕ್ಷ ಪ್ರಲ್ಹಾದ ಚೌಧರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.