ಷೇರು ಮಾರುಕಟ್ಟೆ ಕುರಿತು ಎರಡು ದಿನದ ಕಾರ್ಯಗಾರ

ಚಿತ್ರದುರ್ಗ. ಅ.೧೩; ಎಸ್.ಆರ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳಿಗಾಗಿ ಷೇರು ಮಾರುಕಟ್ಟೆ ಕುರಿತು ಎರಡು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸೆಬಿ ಸಲಹೆಗಾರರಾದ ಡಾ. ಚೈತನ್ಯ ಸುರೇಶ್ ಕಿತ್ತೂರು  ಈ ಕಾರ್ಯಗಾರದ ಉದ್ಘಾಟನೆಯನ್ನು ಗಿಡಕ್ಕೆ ನೀರನ್ನು ಎರೆಯುವ ಮೂಲಕ ನೆರೆವೇರಿಸಿಕೊಟ್ಟರು. ಅವರು ಮಾತನಾಡಿ ಷೇರು ಮಾರುಕಟ್ಟೆಯ ಪ್ರಾಮುಖ್ಯತೆ, ಅದರಲ್ಲಿನ ಉಳಿತಾಯ ಹಾಗೂ ಹೂಡಿಕೆ, ಯೋಜನೆಗಳು ಮತ್ತು ಉದ್ಯೋಗವಕಾಶಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರುಈ ಕಾರ್ಯಗಾರದಲ್ಲಿ ಎಸ್.ಆರ್.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಬಿ ಎ ಲಿಂಗರೆಡ್ಡಿಯವರು, ಎಸ್.ಆರ್.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗರೆಡ್ಡಿಯವರು, ಆಡಳಿತಾಧಿಕಾರಿಯಾದ ಡಾ. ರವಿ ಟಿ ಎಸ್, ಎಸ್.ಆರ್.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸಾಧನ ಎ ಜಿ, ಉಪನ್ಯಾಸಕರುಗಳಾದ ಡಾ. ಈರಣ್ಣ ಜಿ, ಡಾ. ವರದರಾಜ ಡಿ, ಡಾ. ಹೇಮಂತ್ ಕುಮಾರ್ ಚಂದ್ರಶೇಖರ್, ದೇವೇಂದ್ರಪ್ಪ ಕೆ ಉಪಸ್ಥಿತರಿದ್ದರು