ಷೇರು ಪೇಟೆ ಆರಂಭಿಕ ಕುಸಿತ

ಮುಂಬೈ,ಜೂ.೪- ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಬಹುಮತದಿಂದ ಮುನ್ನಡೆ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಆರಂಭಿಕ ಷೇರು ಪೇಟೆ ಕುಸಿತ ಕಂಡಿದೆ.
ದಿನದ ವಹಿವಾಟಿನ ಆರಂಭದಲ್ಲಿ ಸನ್ ಸೆಕ್ಸ್ ೨,೦೦೦ ಅಧಿಕ ಅಂಕಗಳ ಕಡಿಮೆಯಾಗಿದ್ದು ಇದರಿಂದ ಶೇರುಗಳ ಬೆಲೆ ಇಳಿಕೆಯಾಗಿದೆ. ಚುನಾವಣಾ ಆತರ ಸಮೀಕ್ಷೆಯ ಬಳಿಕ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದ ಷೇರು ಸೂಚ್ಯಂಕ ಮತಎಣಿಕೆಯಲ್ಲಿ ಇಳಿಕೆಯಾಗಿದೆ.
ಎನ್‌ಎಸ್‌ಇ ಶೇ. ೨.೨ ರಷ್ಟು ಕುಸಿತ ಕಂಡಿದೆ. ಅಂದರೆ ೨೨,೭೭೮ ರಷ್ಟು ವಹಿವಾಟು ನಡೆಸಿದೆ ಅದೇ ರೀತಿ ಬಾಂಬೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಿದೆ.
ನಿಫ್ಟಿ ಮತ್ತು ಇತರೆ ಸೂಚ್ಯಂಕಗಳು ಕೂಡ ಏರುಮುಖವಾಗಿದ್ದು ಹೂಡಿಕೆದಾರರು ಮತ್ತು ಷೇರುದಾರರಲ್ಲಿ ಮಂದಹಾಸ ಮೂಡಿದೆ.
ಅದರಲ್ಲಿಯೂ ಪ್ರಮುಖವಾಗಿ ೩೦ ಪ್ರಮುಖ ಕಂಪೆನಿಗಳ ಷೇರುಗಳು ಗಣನೀಯವಾಗಿ ಏರಿಕೆಯಾಗಿದೆ ಅವುಗಳೆಂದರೆ ಭಾರತೀಯ ಸ್ಟೇಟ್ ಬ್ಯಾಂಕ್, ರಿಲಯನ್ಸ್, ಎಲ್ ಅಂಡ್ ಟಿಣ ಪವರ್ ಗ್ರಿಡ್, ಎನ್‌ಟಿಪಿಸಿ ಎಚ್‌ಡಿಎಫ್‌ಸಿ, ಸನ್ ಫರ್ಮಾ ನೆಸ್ಟೆ ಲೇ ಸೇರಿದಂತೆ ಹಲವು ಕಂಪನಿಗಳ ಶೇರು ಕುಸಿತ ಕಂಡಿವೆ.
ಮುಂಬೈ ಶೇರು ಪೇಟೆಯಲ್ಲಿ ದಿನದ ಆರಂಭದಲ್ಲಿ ವಹಿವಾಟು ಹೆಚ್ಚಾಗಿದ್ದು ಕುಸಿತ ಕಂಡಿದೆ.