ಷೇರುದಾರ ನೌಕರರಿಗೆ ಷೇರು ಪ್ರಮಾಣ ಪತ್ರ  ವಿತರಣೆ

 ಹೊನ್ನಾಳಿ.ಜು.೨೬: ಈ ಬಾರಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗದೇ ಇರುವುದು ನನ್ನ ದೌರ್ಬಲ್ಯವಲ್ಲ ಬದಲಿಗೆ ರಾಜ್ಯದಲ್ಲಿ ಬಿಜಿಪಿ ಸರ್ಕಾರ ಆಡೆತಡೆ ಇಲ್ಲದೇ ಸುಗಮ ಆಡಳಿತ ಜನತೆಗೆ ನೀಡಲಿ ಎಂದು ನಾನು ಮಾಡಿರುವ ತ್ಯಾಗ ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣಕಾಚಾರ್ಯ ಹೇಳಿದರು. ಅವರು  ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಉದ್ಘಾಟನೆ, ಹಾಗೂ ಸಂಘದ ಸದಸ್ಯರಿಗೆ ಷೇರು ಪತ್ರ ವಿತರಿಸಿ ಅವರು ಮಾತನಾಡಿದರು.ಆದರೆ ಸರ್ಕಾರದಿಂದ ಆಗುವ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಯಾರೇ ಇದ್ದರೂ ತರುವ ಧೈರ್ಯ ಇದೆ, ಆದೈರ್ಯವನ್ನು ಕೊಟ್ಟಿದ್ದು ನೀವು ಎಂದ ಅವರು, ನನಗೆ ಸಚಿವನಾವುದಕ್ಕೂ ಮೊದಲು ನನಗೆ ತಾಲೂಕಿನ ಅಭಿವೃದ್ದಿ ಮುಖ್ಯ ಎಂದರು.ಪ್ರಸ್ತುತ ಸರ್ಕಾರಿ ನೌಕರರ ರಾಜ್ಯ ಅಧ್ಯಕ್ಷ ಷಡಾಕ್ಷರಿ ಅವರು ರಾಜ್ಯದ ಇಡೀ ನೌಕರರ ಸಮುದಾಯಕ್ಕೆ ಸಾಕಷ್ಟು ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಇದೇ ರೀತಿ ಹೊನ್ನಾಳಿಯಲ್ಲಿನ ನೌಕರರರು ತಮಗೊಂದು ಸೂರು ಕಲ್ಪಿಸಿಕೊಳ್ಳಲು ಅನುಕೂಲವಾಗುವಂತೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ಸುಲಭ ಕಂತುಗಳಲ್ಲಿ ನಿವೇಶ ಪಡೆದುÀಕೊಳ್ಳುವ ಕಾರ್ಯಕ್ರಮ ಕೂಡ ಉತ್ತಮವಾಗಿದ್ದು ಈ ನಿಟ್ಟಿನಲ್ಲಿ ತನ್ನ ಕಡೆಯಿಂದ ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದು ಹೇಳಿದರು.ಇದೇ ಸಂದಭÀðದಲ್ಲಿ ಅವರು ಸಂಘದ ನೂತನ ಷೇರುದಾರ ನೌಕರರಿಗೆ ಷೇರು ಪ್ರಮಾಣ ಪತ್ರಗಳನ್ನ ಕೂಡ ವಿತರಿಸಿದರು.ತಾಲೂಕಿನ ಎ.ಪಿ.ಎಂ.ಸಿ.ಹಿAಭಾಗದ ಪ್ರದೇಶ, ತುಂಗಾಭದ್ರಾ ಬಡಾವಣೆ, ಮಲ್ಲೆದೇವರ ಕಟ್ಟೆ ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಈಗಾಗಲೇ 17 ಕೋಟಿ ಮಂಜುರಾಗಿದ್ದು, ಇನ್ನೂ 17 ಕೋಟಿ ಕೆಲಸಕ್ಕಾಗಿ ಟೆಂಡರ್ ಕರೆಯಲಾಗಿದೆ. ಯುಜಿಡಿ ಗಾಗಿ 60 ಕೋಟಿ ಮಂಜೂರಾಗಿದ್ದು 1ನೇ ಹಂತದಲ್ಲಿ 20 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿ. ಇದರ ಅಧ್ಯಕ್ಷ ಅರುಣ್ ಕೆ. ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇವಲ ಹಣ ಗಳಿಕೆಗಾಗಿ ಗೃಹ ನಿರ್ಮಾಣ ಸಂಘ ಮಾಡುತ್ತಿಲ್ಲ, ಪ್ರತಿಯೊಬ್ಬ ಸರ್ಕಾರಿ ನೌಕರರು ಶ್ರೀಮಂತರಲ್ಲ, ಅವರಿಗಾಗಿ ಒಂದು ಸೂರನ್ನು ಕಡಿಮೆ ಧರದಲ್ಲಿ ಕೊಡುವುದಕ್ಕೆ ಈ ಸಹಕಾರ ಸಂಘವನ್ನು ಸ್ಥಾಪಿಸಿದ್ದೇವೆ ಎಂದರು.ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಹಾಗೂ ಜಿ.ಆರ್.ಎನ್. ಡೆವಲಪರ್ಸ ರವಿಗಾಳಿ ಮಾತನಾಡಿ, ತಾನೂ ಕೂಡ ಒಬ್ಬ ಸರ್ಕಾರಿ ನೌಕರನಾಗಿದ್ದು, ನೌಕರರ ಸಂಘದಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಕಾರಣಕರ್ತರು ಸರ್ಕಾರಿ ನೌಕರರು ಅವರ ಋಣ ತನ್ನ ಮೇಲಿದ್ದು, ನೌಕರರಿಗೆ ಅತ್ಯಂತ ನ್ಯಾಯಯುತ ಬೆಲೆಯಲ್ಲಿ ನಿವೇಶ ಒದಗಿಸಿಕೊಡುವ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಅಧ್ಯಕ್ಷ ಕುಮಾರ್ ಬಿ. ನ್ಯಾಮತಿ ತಾಲೂಕಿನ ಅಧ್ಯಕ್ಷ ರವಿಕುಮಾರ್,ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ರುದ್ರೇಶ್, ಕಂದಾಯ ಇಲಾಖೆ ನೌಕರರ ಅಧ್ಯಕ್ಷ ಪರಮೇಶ್ವರಪ್ಪ ಎಸ್, ನೌಕರರ ವಿವಿದೊದ್ದೇಶ ಸಂಘದ ಅಧ್ಯಕ್ಷ ನಾಗರಾಜ್ ದೊಂಕತ್ತಿ, ನ್ಯಾಮತಿ ತಾ. ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜ ಬಾವಿ,ಅನುದಾನಿತ ಶಿಕ್ಷಣ ಸಂಸ್ಥೆ ಅಧ್ಯಕ್ಷ ಧನಂಜಯ, ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷೆ ಷಹಜಾನ್ ಗೃಹ ನಿರ್ಮಾಣ ಸಂಘದ ಪದಾಧಿಕರಿಗಳು ಇದ್ದರು,ಸಿ.ಎಂ.ಪದವೀಧರ ಮಹಾಂತೇಶ್ ಉಪಸ್ಥಿತರಿದ್ದರು.. 

Attachments area