ಷಣ್ಮುಖ ಶಿವಯೋಗಿಗಳ ಜಾತ್ರೆ ರದ್ದು

ಜೇವರ್ಗಿ:ಮೇ.28: ಇದೇ ತಿಂಗಳು 30 ಮತ್ತು 31 ನೇಯ ತಾರೀಖು ನಡೆಯಬೇಕಿದ್ದು 17 ನೇಯ ಶತಮಾನದ ಕೊನೆಯ ವಚನಕಾರರು, ಚರಚಕ್ರವರ್ತಿ ಶ್ರೀ ಷಣ್ಮುಖ ಶಿವಯೋಗಿಗಳ ಜಾತ್ರಾಮತೋತ್ಸವ ರದ್ದುಗೊಳಿಸಲಾಗಿದೆ ಎಂದು ಟ್ರಸ್ಟ್ ಕಮಿಟಿ ಮತ್ತು ಊರಿನ ಪ್ರಮುಖರು ಮತ್ತು ಹಿರಿಯರು ಎಲ್ಲಾ ಟ್ರಸ್ಟ್ ಸದಸ್ಯರು ಸೇರಿ ಈ ಬಾರಿ ಜಾತ್ರೆ ರದ್ದುಗೊಳಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಎಂದು ಟ್ರಸ್ಟ್ ಕಾರ್ಯದರ್ಶಿ, ಕಲಬುರಗಿ ವಿವಿ ಮಾಜಿ ಸಿಡಿಕೇಟ್ ರಾದ ಸಂಗನಗೌಡ ಪಾಟೀಲ ಗುಳ್ಯಾಳ, ನ್ಯಾಯವಾದಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಕಾರದ ನಿಯಮ ಮತ್ತು ಕಲಂ 144 ಜಾರಿಯಲ್ಲಿದೆ. ಸಾರ್ವಜನಿಕರು ಸೇರುವಂತಿಲ್ಲ, ಕೋವಿಡ್ 19, ಮಹಾಮಾರಿ ರೋಗ ಇಡೀ ದೇಶ,ರಾಜ್ಯ, ಜಿಲ್ಲೆ ಮತ್ತು ತಾಲೂಕು ಗ್ರಾಮದಲ್ಲಿ ಇರುವುದರಿಂದ ಈ ಮಹಾಮಾರಿ ರೋಗ ತೊಲಗಿಸಲು ಸರ್ಕಾರ ಮತ್ತು ಸಾರ್ವಜನಿಕರು ಸಹಕರಿಸುವುದು ಅತ್ಯಗತ್ಯವಾಗಿದೆ.
ಈ ಬಾರಿ ಮಠದ ಜಾತ್ರೆ ರದ್ದುಗೊಂಡಿದೆ. ಮಠದ ಅಪಾರ ಭಕ್ತರು ಇರುವುದರಿಂದ ತಮ್ಮ ತಮ್ಮ ಮನೆಯಲ್ಲಿ ಸರ್ಕಾರದ ನಿಯಮಗಳು ಮತ್ತು ಕೋರೋನಾ ನಿಯಮಗಳು ಪಾಲಿಸಿ ತಾವು ತಮ್ಮ ಮನೆಯಲ್ಲಿ ಚರಚಕ್ರವರ್ತಿ, ವಚನಕಾರ ಶ್ರೀಷಣ್ಮುಖ ಶಿವಯೋಗಿಗಳ ಭಾವಚಿತ್ರ ಮತ್ತು ವಚನ ಸಂಪುಟ ಇಟ್ಟು ಪೂಜೆ ಸಲ್ಲಿಸುವ ಮುಖಾಂತರ ಶ್ರೀ ಗಳ ಸ್ಮರಣೆ ಮಾಡುವುದರೊಂದಿಗೆ ಜಾತ್ರೆ ಆಚರಿಸುವುವಂತೆ ಮನವಿ ಮಾಡಿದರು