ಶ್ವೇತಾಗೆ ಪಿಎಚ್‍ಡಿ

ವಿಜಯಪುರ:ಫೆ.8: ಕು. ಶ್ವೇತಾ ಕೆ. ಅವರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಇಂಗ್ಲೀಷ ವಿಭಾಗದಲ್ಲಿ ಸಲ್ಲಿಸಿದ ಪ್ರೌಢ ಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‍ಡಿ) ಪದವಿಯನ್ನು ಪ್ರದಾನ ಮಾಡಿದೆ.
ಇಂಗ್ಲೀಷ ವಿಭಾಗದ ಸಹಪ್ರಾಧ್ಯಾಪಕ ಡಾ. ದೀಪಕ ಎಚ್. ಶಿಂಧೆ ಇವರ ಮಾರ್ಗದರ್ಶನದಲ್ಲಿ ಸಾದರಪಡಿಸಿದ ‘ಎಕ್ಸಪ್ಲೋರೇಶನ್ ಆಫ್ ವಾಯ್ಸಸ್ ಆಫ್ ಬ್ಲಾಕ್‍ವುಮೆನ್ ಇನ್ ದಿ ನಾವೆಲ್ಸ್ ಆಫ್ ಟೆರ್ರಿ ಮ್ಯಾಕ್‍ಮಿಲನ್ ಎ ಪೋಸ್ಟ್‍ಕೊಲೊನಿಯಲ್ ಸ್ಟಡಿ’ ಎಂಬ ಪ್ರೌಢ ಪ್ರಬಂಧವನ್ನು ಪರಿಗಣಿಸಿ ಈ ಪದವಿಯನ್ನು ಕಲಾ ನಿಕಾಯದಲ್ಲಿ ನೀಡಿದ್ದಾರೆ. ಕು. ಶ್ವೇತಾ ಕೆ. ಅವರು ಸಿಕ್ಯಾಬ್ ಎ.ಆರ್.ಎಸ್.ಇನಾಮದಾರ ಮಹಿಳಾ ಮಹಾವಿದ್ಯಾಲಯದ ಹಿಂದಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಅವರ ಈ ಶೈಕ್ಷಣಿಕ ಸಾಧನೆಗೆ ಪ್ರಾಚಾರ್ಯ ಪ್ರೊ. ಮನೋಜ್ ಕೊಟ್ನಿಸ್ ಹಾಗೂ ಪ್ರಾಧ್ಯಾಪಕ ವರ್ಗದವರು ಅಭಿನಂದಿಸಿದ್ದಾರೆ.