
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೮; ಬಿಳಿಬಣ್ಣವೆಂದರೆ ಶಾಂತಿಯ ಸಂಕೇತ, ಪರಿಶುದ್ಧತೆಯ ಪ್ರತೀಕವೆಂಬಂತೆ” ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ ನರ್ಸರಿ ವಿಭಾಗದ ಮಕ್ಕಳು ಬಿಳಿಯ ಬಣ್ಣದ ವಸ್ತ್ರವನ್ನು ಧರಿಸಿ “ಮಿಲ್ಕ್ ಡೇ” ಯನ್ನು ಆಚರಿಸಿದರು.ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಹೆಚ್.ಅನಿಲ್ ಕುಮಾರ್, ಕಾರ್ಯದರ್ಶಿಗಳಾದ ಉಮಾಪತಯ್ಯ ಹಾಗೂ ಖಜಾಂಚಿಗಳಾದ ಪ್ರವೀಣ್ ಹುಲ್ಲುಮನೆ ಮಕ್ಕಳಿಗೆ ಬಾದಾಮಿ ಹಾಲನ್ನು ನೀಡುವ ಮೂಲಕ ಚಾಲನೆ ನೀಡಿದರು.ಈ ಸನ್ನಿವೇಶದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಸಯ್ಯದ್ ಆರಿಫ್ ಆರ್. ಗೋಮಾತೆಯಲ್ಲಿರುವ ಹಾಲಿನ ಪೌಷ್ಟಿಕಾಂಶಗಳ ಬಗ್ಗೆ ತಿಳಿಸಿದರು. ಸನ್ನಿವೇಶದಲ್ಲಿ ಹಾಗೂ ಶ್ರೀಮತಿ ಪ್ರೀತಾ.ಟಿ.ರೈ, ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ , ಶಿಕ್ಷಕವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.