ಶ್ರೇಷ್ಠ ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ

ಕಲಬುರಗಿ,ನ.30: ಮಹಿಳಾ ಶಿಕ್ಷಣಕ್ಕೆ ಪ್ರಯತ್ನ, ಸ್ತ್ರೀ-ಪುರುಷರ ನಡುವಿನ ಅಸಮಾನತೆ ನಿರ್ಮೂಲನೆ, ಜಾತಿ, ಧರ್ಮದ ಹೆಸರಿನ ಮೇಲೆ ನಡೆಯುತ್ತಿದ್ದ ವ್ಯಾಪಕವಾದ ಶೋಷಣೆ, ಮೌಢ್ಯತೆ, ಅಂಧಶೃದ್ಧೆ, ಅಸ್ಪøಷ್ಯತೆ ಹೋಗಲಾಡಿಸಲು ನಿರಂತರವಾಗಿ ಇಡೀ ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿದ ಮಹಾತ್ಮ ಜ್ಯೋತಿಬಾ ಫುಲೆಯವರು ಶ್ರೇಷ್ಠ ಸಮಜ ಸುಧಾರಕರಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಮಹಾತ್ಮ ಜ್ಯೋತಿಬಾ ಫುಲೆಯವರ ಸ್ಮರಣೋತ್ಸವ’ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬ್ರಿಟಿಷರ ಶೋಷಣೆಯಿಂದ ಸಾಮಾಜಿಕವಾಗಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದ ಸಂದರ್ಭವನ್ನು ಬಾಲ್ಯದಿಂದಲೇ ಕಂಡ ಫುಲೆಯವರು, ಮುಂದೆ ದೊಡ್ಡ ಪ್ರಮಾಣದ ಹೋರಾಟಕ್ಕೆ ಇದು ಸ್ಪೂರ್ತಿಯಾಯಿತು. ‘ಸತ್ಯ ಶೋಧಕ ಸಮಾಜ’ದ ಮೂಲಕ ಬಾಲ್ಯ ವಿವಾಹ, ವಿಧವೆಯರ ಶೋಷಣೆ ವಿರುದ್ಧ ಸಂಘಟಿತ ಹೋರಾಟ ಮಾಡಿದರು. ಶೋಷಿತ ಜನಾಂಗವು ಅನುಭವಿಸುತ್ತಿದ್ದ ಮೂಕ ರೋಧನೆಗೆ ಅವರು ಧ್ವನಿಯಾದರು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ವೀರೇಶ ಬೋಳಶೆಟ್ಟಿ ನರೋಣಾ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಪರಮೇಶ್ವರ ದೇಸಾಯಿ, ರವಿ ಚಿಗ್ಗೋಣ್, ಸಿದ್ದರಾಮ ತಳವಾರ, ಮಲ್ಲಿನಾಥ ಮುನ್ನಳ್ಳಿ, ಓಂಕಾರÀ ಗೌಳಿ ಸೇರಿದಂತೆ ಮತ್ತಿತರರು ಇದ್ದರು.