ಶ್ರೇಷ್ಠ ಸಂವಿಧಾನ ನೀಡಿದವರು ಡಾ. ಅಂಬೇಡ್ಕರ್

ಗುಳೇದಗುಡ್ಡ,ಏ.16: ಡಾ. ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಸಂವಿಧಾನಾತ್ಮಕ ಹಕ್ಕುಗಳನ್ನು ಜಾತಿ, ಧರ್ಮ, ಲಿಂಗಭೇಧವಿಲ್ಲದೇ ಎಲ್ಲರಿಗೂ ದೊರಕಿಸಿಕೊಟ್ಟಿದ್ದಕ್ಕಾಗಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಡಾ. ಅಂಬೇಡ್ಕರ್ ಅವರಿಗೆ ಋಣಿಯಾಗಿರಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರಾಜೇಶ ಕೆ. ಹೇಳಿದರು.
ಅವರು ಡಾ. ಬಿ.ಆರ್. ಅಂಬೇಡ್ಕರ ಅವರ 133ನೇ ಜನ್ಮದಿನದ ಅಂಗವಾಗಿ ಪಟ್ಟಣದ ಪುರಸಭೆಯಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದೇಶಕ್ಕೆ ಅತ್ಯಂತ ಶ್ರೇಷ್ಠವಾದ ಸಂವಿಧಾನ ನೀಡುವಲ್ಲಿ ಪ್ರಮುಖಪಾತ್ರ ವಹಿಸಿದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಮ್ಯಾನೇಜರ್ ಎ.ಎಚ್. ಮುದ್ದೇಬಿಹಾಳ, ಕುಮಾರ ತಟ್ಟಿಮಠ, ಅನಿಲ ಕಪಾಟೆ. ವಿನಾಯಕ ಹೋಟಿ, ಭೀಮಶಿ ನಡುವಿನಮನಿ, ವೀರುಪಾಕ್ಷ ರಾಂಪೂರ, ಮಧು ಶಿಕ್ಕಲಗಾರ, ಎಫ್.ಡಿ. ವಾಲೀಕಾರ, ಬಾಲಮ್ಮ ನಡುವಿನಮನಿ ಮತ್ತಿತರರು ಇದ್ದರು.