
ಸಂಜೆವಾಣಿ ವಾರ್ತೆ
ಸಂಡೂರು :ಏ: 15: 132 ನೇ ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಯಶಸ್ವಿಯಾಗಿ ತಾಲೂಕಿನ ತೋರಣಗಲ್ಲು ಗ್ರಾಮದ 4ನೇ ವಾರ್ಡಿನ ಕೆಂಚಮ್ಮನ ಗುಡಿ ಅವರಣದಲ್ಲಿ ಯಶಸ್ವಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡಿ.ವೈ.ಎಫ್.ಐ. ನ ಸಂಡೂರು ತಾಲ್ಲೂಕು ಸಾಂಸ್ಕೃತಿಕ ಕಾರ್ಯದರ್ಶಿ ನಾಗಭೂಷಣ ರವರು ಮಾತನಾಡಿ ಗಾಳಿ ನೀರು ಬೆಳಕಿಗೆ ಹೇಗೆ ಜಾತಿ ಮತಬೇದವಿಲ್ಲವೋ ಹಾಗೇ ಮನುಷ್ಯ ಯಾವುದೇ ಕುಲಕ್ಕೂ ಸೇರಿಲ್ಲ, ಮಾನವ ಕುಲ ಒಂದೇ ಎಂದವರು ಡಾ. ಬಿ.ಆರ್ ಅಂಬೇಡ್ಕರ್ ವಿಶ್ವರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರ ಜನ್ಶ ದಿನ ಆಚರಣೆ ದೇಶಾದ್ಯಂತ ಇಂದು ನಡೆಯುತ್ತದೆ. ಅವರು ಯಾರು ಮಾಡದ ಕೆಲಸ ತಮ್ಮ ಶ್ರಮದಿಂದ ಬಡತನದ ಆರ್ಥಿಕವಾಗಿ ಕಷ್ಟದಲ್ಲಿಯೇ ಶಿಕ್ಷಣ ಪಡೆದು ತನ್ನ ಜೀವನದ 90ರಷ್ಟು ಸಮಯ ನಮ್ಮ ದೇಶಕ್ಕೆ , ಹಿಂದುಳಿದ ಮತ್ತು ಬಡಜನರ ಜನಸಾಮಾನ್ಯರಿಗೆ ಮೀಸಲಿಟ್ಟಿದ್ದಾರೆ. ಆ ಶ್ರಮದ ಪ್ರತಿಕವಾಗಿ ನಮ್ಮ ಭಾರತ ದೇಶಕ್ಕೆ ಸಂವಿಧಾನ ರಚನೆಯಾಯಿತು ಅವರು ಮಾಡಿದ ಬಹುತೇಕ ಕರ್ತವ್ಯಗಳು ಇಂದಿನ ಯುವ ಜನತೆ ಮರೆತು ಒಂದು ಜಾತಿಗೆ ಮೀಸಲಿಟ್ಟಿದ್ದಾರೆ ಹಾಗಾಗಿ ಮುಂದಿನ ದಿನಗಳಲ್ಲಿ ದೇಶದ ಅರ್ಧದಷ್ಟು ಸಂಖ್ಯೆಯಲ್ಲಿ ಯುವಜನತೆ ಇದೆ. ಅವರುಗಳು ತಮ್ಮ ಶಿಕ್ಷಣದ ಅಧ್ಯಯನ ಜೊತೆ ಅಂಬೇಡ್ಕರ್ ಅವರು ಮಾಡಿದ ಕೆಲಸಗಳನ್ನು ಮುಂದೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಸ್ವಾಮಿ ರವರು ಮಾತನಾಡಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಎಂದರೇ ಕೇವಲ ಭಾರತರತ್ನ ಮಾತ್ರವಲ್ಲದೆ ವಿಶ್ವದ ರತ್ನವಾಗಿದ್ದಾರೆ ಹಾಗಾಗಿ ಅವರ ಜನ್ಮದಿನದ ಶುಭಾಶಯಗಳನ್ನು ಈ ನಾಡಿನ ಯುವ ಜನತೆಗೆ ಸಲ್ಲಿಸುತ್ತೇನೆ ಅದೇ ರೀತಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ನಮ್ಮ ಭಾರತ ದೇಶಕ್ಕೆ ಸಂವಿಧಾನವನ್ನು ತಂದರು ಮಾತ್ರವಲ್ಲದೆ ಅವರ ಕೀರ್ತಿಗೆ ಬೆನ್ನೆಲುಬಾಗಿ ಕೇವಲ ಮಹಿಳೆಯಾಗಿದ್ದು ಬಾಳ ಸಂಗಾತಿ ರಾಮಬಾಯಿ ರವರು ತನ್ನ ಸಂಸಾರ ಜೊತೆ ತಾನು ದುಡಿದು ಗಂಡನನ್ನು ಓದಿಸುತ್ತಾಳೆ ಪ್ರಸಕ್ತ ಸಂದರ್ಭದಲ್ಲಿ ತಂದೆ ತಾಯಿ ಮಕ್ಕಳಿಗೆ ಮತ್ತು ಅಣ್ಣ ತಮ್ಮ ಅಕ್ಕ ತಂಗಿಯರು ತಮ್ಮ ಮನೆ ಅವರಿಗೆ ಓದಿಸಲು ಇವತ್ತು ಮುಂದೆ ಬರಲಾರದಂತ ಪರಿಸ್ಥಿತಿ ಇದ್ದು ಅಂದು ಗರ್ವದಿಂದ ಆ ಮಹಿಳೆ ಓದುಸುತ್ತಾಳೆ ಆ ರಾಮಬಾಯಿ ಶ್ರಮದ ಇಂದಿನ ಮಹಿಳೆಯರು ಮತ್ತು ತಾಯಂದಿರಿಗೆ ಆದರ್ಶ ವಾಗಬೇಕು. ಯುವಜನರು ಇಂತಹ ಬಹುತೇಕ ವಿಷಯಗಳನ್ನು ಅರಿತು ತಮ್ಮ ಮನೆಗಳ ಕುಟುಂಬಸ್ಥರಿಗೆ ಜಾಗೃತಿ ಮೂಡಿಸಬೇಕು ನಮ್ಮಲ್ಲಿ ಯಾವುದೇ ಜಾತಿ ಧರ್ಮ ಭಾಷೆ ಭೇದವಿಲ್ಲದೇ ನಾವುಗಳು ನಮ್ಮ ಕರ್ತವ್ಯಗಳನ್ನು ಮರೆಯದೆ ಅಂಬೇಡ್ಕರ್ ಅವರ ದಾರಿಯಲ್ಲಿ ನಮ್ಮ ದೇಶದ ಬಡಜನರ ,ಅಸ್ಪೃಶ್ಯರ , ದಲಿತ ಜನಸಾಮಾನ್ಯರ ಅಭಿವೃದ್ಧಿಗಾಗಿ ಈ ದೇಶದ ಸರ್ವತೋಮುಖ ಸಮಾನತೆಗಾಗಿ ಸಮ ಸಮಾಜ ಕಟ್ಟವ ಮೂಲಕ ಶ್ರಮ ವಹಿಸಿ ಈ ದೇಶದ ಅನೈತಿಕ ಚಟುವಟಿಕೆಗಳಿಗೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಅತ್ಯಾಚಾರ, ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟಗಳು ನಮ್ಮ ಸರ್ಕಾರಗಳಿಗೆ ಮುಟ್ಟಬೇಕು ಎಂದರು.
ಈ ಕಾರ್ಯಕ್ರಮ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡರಾದ ಹುಲುಗಪ್ಪ, ಗಂಗರಾಮಪ್ಪ, ಗಂಗಮ್ಮ, ಹೋನ್ನರಪ್ಪ ರಾಮಸಾಗರ, ಗಂಗಪ್ಪ ಆಙಈI ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ತಾಲ್ಲೂಕು ಸಾಂಸ್ಕೃತಿಕ ಕಾರ್ಯದರ್ಶಿ ನಾಗಭೂಷಣ ಮುಖಂಡರಾದ ಅಕ್ಷಯ್ ದಲಿತ ಯುವ ಮುಖಂಡರಾದ ಶೆಕ್ಷಾ, ರಮೇಶ್, ತಾಯಪ್ಪ, ಶಂಕರ, ಸಿಂಹಾದ್ರಿ,ಶಂಕರ್, ದುರುಗೇಶ್, ಅವಿನಾಶ್,ರುಜು, ಜೀವನ್ , ಮುದ್ದು ಮಕ್ಕಳು ಇತರರು ಭಾಗವಹಿಸಿದ್ದರು.