ಶ್ರೇಷ್ಠ ಜೀವನಕ್ಕೆ ಮಹಾನ್ ವ್ಯಕ್ತಿಗಳ ವಿಚಾರ ಪಾಲನೆ ಅಗತ್ಯ- ಎಸ್.ಪಾಟಪ್ಪ

ರಾಯಚೂರು,ಜ.೪- ಮಹಾನ್ ವ್ಯಕ್ತಿಗಳು ನೀಡಿದ ಆಚಾರ, ವಿಚಾರಗಳ ನಿರ್ಲಕ್ಷ್ಯದಿಂದ ಮನುಷ್ಯನ ಜೀವನ ಅದೋಗತಿಯತ್ತ ಸಾಗುತ್ತಿದೆ. ಮಾತೆ ಸಾವಿತ್ರೆಬಾಯಿ ಪುಲೆ ಅವರ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ವಿಶೇಷ ಉಪಾನ್ಯಾಸಕ ಎಸ್.ಪಾಟಪ್ಪ ಹೇಳಿದರು.
ಅವರಿಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ವತಿಯಿಂದ ಆಯೋಜಿಸಲಾದ ಸಾವಿತ್ರಿಬಾಯಿ ಪುಲೆ ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿರುವ ಮೌಡ್ಯ ಕಟ್ಟುಪಾಡುಗಳನ್ನು ಎದುರಿಸಿ ಮಹಿಳೆಯರಿಗೆ ಶಿಕ್ಷಣ ನೀಡಿದ ಕ್ರಾಂತಿಕಾರಿ ಮಹಿಳೆ ಸಾವಿತ್ರಿಬಾಯಿ ಪುಲೆ ಅವರು ಎಂದರು.
ಸಮಾಜದಲ್ಲಿ ಹಿಂದುಳಿದ ಕಟ್ಟಕಡೆಯ ಜನರ ಅಭಿವೃದ್ದಿಗಾಗಿ ಶ್ರಮಿಸಿದ ಮಹಾನ್ ಚೇತನ ಜ್ಯೋತಿ ಬಾಯಿಪುಲೆ ಮತ್ತು ಸಾವಿತ್ರಬಾಯಿ ಪುಲೆ ದಂಪತಿ. ೧೮೪೮ ರಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗಾಗಿ ಮೊದಲ ಶಾಲೆಯನ್ನು ಜ್ಯೋತಿಬಾಯಿ ಪುಲೆ ತೆರೆದಾಗ ಅವರಿಗೆ ಅನೇಕ ರೀತಿಯ ಅವಮಾನಗಳನ್ನು ಎದುರಿಸಿ ಶಾಲೆ ನಡೆಸಿದರು. ಅವರೇ ಸ್ವತಃ ತಮ್ಮ ಪತ್ನಿ ಸಾವಿತ್ರಿಬಾಯಿ ಪುಲೆ ಅವರನ್ನು ಶಿಕ್ಷಕಿಯರಾಗಿ ತಯಾರಿಸಿ ಶೈಕ್ಷಣಿಕ ಕ್ರಾಂತಿಗೆ ನಾಂದಿಹಾಡಿದರು ಎಂದರು.
ಅಕ್ಷರ ಮಾತೆ ಮತ್ತು ಮಹಿಳೆಯರಿಗೆ ಶಿಕ್ಷಣ ನೀಡಲು ಹಲವಾರು ಅಡೆತಡೆಗಳನ್ನು ಎದುರಿಸಿದ ಧೀರ ಮಹಿಳೆ ಸಾವಿತ್ರಿಬಾಯಿ ಪುಲೆ ಎಂದು ಉಪಾನ್ಯಾಸಕ ಮಹಾಂತೇಶ ಅಂಗಡಿಯವಾರು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ಕಾಲೇಜಿನ ಪ್ರಾಂಶುಪಾಲ ಮಲ್ಲನಗೌಡ, ಉಪನ್ಯಾಸಕ ದಸ್ತಗಿರಿಸಾಬ್ ದಿನ್ನಿ, ಕಲ್ಪನಾ ಚಾವ್ಲಾ ಸಂಯೋಜಕಿ ಪುಷ್ಪ, ಸಮಾಜಶಾಸ್ತ್ರದ ಉಪನ್ಯಾಸಕ ಜೆ.ಎಲ್.ಈರಣ್ಣ, ಅರ್ಥಶಾಸ್ತ್ರ ಉಪನ್ಯಾಸಕ ಪ್ರಾಣೇಶ ಕುಲಕರ್ಣಿ, ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಯಂಕಣ್ಣ, ಲೆಕ್ಕಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಉಪನ್ಯಾಸಕ ಶಿವರಾಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು