ಶ್ರೇಷ್ಠವಾದ ಸಂವಿಧಾನವನ್ನು ಬರೆದವರು ಅಂಬೇಡ್ಕರ್ – ಶಿವಲಿಂಗಪ್ಪ

ಸಂಡೂರು ಸೆ16 : ಅಂಬೇಡ್ಕರ್ ಒಬ್ಬ ಮಹಾನ್ ಚೇತನ ಅವರು ರಚಿಸಿದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನವನ್ನು ನಮಗೆ ನೀಡಿದ್ದಾರೆ, ಅದರಿಂದ ಇಂದು ನಾವೆಲ್ಲರೂ ಸಹ ಸಮಾನತೆಯಿಂದ ಪ್ರಜಾಪ್ರಭುತ್ವದಲ್ಲಿ ಉತ್ತಮ ಬದುಕನ್ನು ಸಾಗಿಸಲು ಸಾಧ್ಯವಾಗಿದೆ ಎಂದು ದಲಿತ ಸಂಘಟನೆಯ ಮುಖಂಡ ಶಿವಲಿಂಗಪ್ಪ ತಿಳಿಸಿದರು.
ಅವರು ಇಂದು ತಾಲೂಕಿನ ಯಶವಂತನಗರ ಗ್ರಾಮದಲ್ಲಿ ಡಾ. ಬಿ.ಅರ್. ಅಂಬೇಡ್ಕರ್ ಅವರ ಧಾರವಾಹಿ ಪ್ರಸಾರವಾಗುತ್ತಿದ್ದು ಅದಕ್ಕೆ ಪೂರಕವಾಗಿ ಜನರಿಗೆ ಅದನ್ನು ನೋಡಿ ಶಿಕ್ಷಣೆ ಪಡೆಯಿರಿ ಎಂದು ಜಾಗೃತಿಯ ಬ್ಯಾನರ್ ಹಾಕಿ ಚಾಲನೆ ನೀಡಿ ಮಾತನಾಡಿ ಅಂಬೇಡ್ಕರ್ ಅಂತಹ ದೊಡ್ಡ ವ್ಯಕ್ತಿಯಾಗಲು ಬಾಲ್ಯದಲ್ಲಿ ಅವರು ಅನುಭವಿಸಿದಂತಹ ಕಷ್ಟಗಳು, ಅವು ಒಂದು ಎರಡಲ್ಲ, ನಿತ್ಯವೂ ಸಹ ನರಕದ ಬದುಕನ್ನು ಸವೆಸಿದರು, ಪ್ರಮುಖವಾಗಿ ಅಸ್ಪಷ್ಯತೆ, ಅಸಹಿಷ್ಣತೆ ಮತ್ತು ಜಾತಿಯತೆಯ ತಾಂಡವ ವಾಡುವಿಕೆ, ಸಮಾನ ಶಿಕ್ಷಣದ ಕೊರತೆ, ಸಮಾನ ಪ್ರವೇಶ ವಿಲ್ಲದಿರುವುದು ಇಂತಹ ಅನೇಕ ಅವಮಾನಗಳನ್ನು ಸಹಿಸಿಕೊಂಡ ಅವರು ಉನ್ನತ ಶಿಕ್ಷಣ ಪಡೆಯುವಲ್ಲಿ ಯಶಸ್ವಿಯಾದರು, ಅಂತಹ ಧೀಮಂತ ನಾಯಕನ ಧಾರವಾಹಿಯನ್ನು ಜೀ ವಾಹಿನಿಯಲ್ಲಿ ಪ್ರಸಾರ ವಾಗುತ್ತಿದ್ದು ಪ್ರತಿಯೊಬ್ಬರೂ ಸಹ ನೋಡುವ ಮೂಲಕ ಒಬ್ಬ ನಾಯಕನಾಗಲು ಯಾವ ರೀತಿಯ ಕಷ್ಟಗಳನ್ನು ಅನುಭವಿಸಿದ, ನಾವು ಸಹ ಯಾವ ರೀತಿ ಬೆಳೆಯ ಬೇಕು ಎಂಬುದನ್ನು ತಿಳಿಯೋಣ ಎಂದರು.
ಈ ಸಂದರ್ಭದಲ್ಲಿ ಕರಾವೇ ತಾಲೂಕು ಘಟಕದ ಅಧ್ಯಕ್ಷ ಪಿ. ರಾಜು ಮಾತನಾಡಿ ಬರೀ ಸಂವಿಧಾನವನ್ನು ನೀಡಲಿಲ್ಲ, ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಅವರು ಒಬ್ಬರಾದರೂ, ಕಾರಣ ಅವರು ಪಡೆದ ಪದವಿಗಳು, ಪಡೆದ ಬಹುಮಾನಗಳು ಅವರನ್ನು ಹುಡುಕೊಂಡು ಬಂದವು, ಅದಕ್ಕೆ ಶ್ರಮ ಮುಖ್ಯವಾದುದು, ನಿರಂತರ ಅಧ್ಯಾಯನ, ಅನ್ಯಾಯವನ್ನು ಪ್ರತಿಭಟಿಸುವಂತಹ ಗುಣ ಬಹು ಮುಖ್ಯವಾದುದು, ಅದ್ದರಿಂದ ಸ್ವಾಭಿಮಾನದಿಂದ ಶಿಕ್ಷಣ ಪಡೆದು ದೇಶದ ಶ್ರೇಷ್ಠ ಮಂತ್ರಿಗಳಾಗಿ ಹೊರ ಹೊಮ್ಮಿದರು ಎಂದರು.
ಈ ಸಂದರ್ಭದಲ್ಲಿ ಶಿವಲಿಂಗಪ್ಪ, ಕುಮಾರಸ್ವಾಮಿ, ಚಂದ್ರಶೇಖರ್, ಯಶವಂತನಗರದ ಮಲಿಯಪ್ಪ, ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.