ಶ್ರೇಷ್ಟ ವಾದ ಮಾನವ ಜನ್ಮ ಸಾರ್ಥಕ ಗೊಳಿಸಲು ಆಧ್ಯಾತ್ಮಿಕತೆ ಆಸರೆ:ಡಾಕ್ಟರ್ ಜಾದವ್

ಗುರುಮಠಕಲ್:ನ.20: ಸಕಲ ಚರಾಚರ ಜೀವರಾಶಿ ಗಳಿಗಿಂತ ಶ್ರೇಷ್ಠ ವಾಗಿದ್ದು ಮತ್ತು ಧರ್ಮ.ಅರ್ಥ.ಕಾಮ.ಮೋಕ್ಷಾಪೆಕ್ಷವಂ ಪಡೆಯುವುದಕ್ಕಾಗಿ ಮಾನವ ಜನ್ಮ ಶ್ರೇಷ್ಠ ವಾಗಿದ್ದು ಮತ್ತು ಜನ್ಮ ಸಾರ್ಥಕ ಪಡಿಸಿಕೊಳ್ಳಲು ನೆಮ್ಮದಿ ಹಾಗೂ ಮುಕ್ತಿಯನ್ನು ಪಡೆಯಲು ಇಂತಹ ಅಧ್ಯಾತ್ಮಿಕ ಚಿಂತನೆಗಳು.ಗುರು ಹಿರಿಯರ ಸತ್ಸಂಗ.ಧರ್ಮ ಸಭೆಗಳಲ್ಲಿ ಮಾನವನು ತಾನು.ಮನ.ಧನದಿಂದ ತನ್ನನ್ನು ತಾನು ಅಳವಡಿಸಿ ಕೊಂಡಾಗ ಮಾತ್ರ ನೆಮ್ಮದಿ ಶಾಂತಿ ಸುಖ ಮೆಲಾಗಿ ಶ್ರೀ ಲಕ್ಷ್ಮೀ ತಿಮ್ಮಪ್ಪ ಸ್ವಾಮಿ ಯವರ ಕೃಪಾಶೀರ್ವಾದ ನಾವು ಪಡೆದುಕೊಳ್ಳಬೇಕಾದರೆ ಇಂತಹ ಆಧ್ಯಾತ್ಮಿಕ ವಾದ ಧರ್ಮ ಸಭೆ ಯಲ್ಲಿ ನಾವು ನೀವೆಲ್ಲರೂ ಭಾಗವಹಿಸ ಬೇಕಾಗುವದು ಎಂದು ಲೋಕಸಭೆ ಸದಸ್ಯರು ಕಲಬುರ್ಗಿ ಡಾಕ್ಟರ್ ಉಮೇಶ್ ಜಿ.ಜಾಧವ್ ಹೇಳಿದರು. ತಾಲೂಕಿನ ಸುಕ್ಷೇತ್ರ ಶ್ರೀ ಬೋಡಬಂಡ್ ಗ್ರಾಮ ದಲ್ಲಿ ಶ್ರೀ ಲಕ್ಷ್ಮೀ ತಿಮ್ಮಪ್ಪ ಸ್ವಾಮಿ ದೇವಸ್ಥಾನ ದಲ್ಲಿ 12 ನೇ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆ ಯಲ್ಲಿ ಭಾಗವಹಿಸಿ ಮಾತನಾಡಿದ ರು. ಇಂತಹ ಧಾರ್ಮಿಕ ವಿಚಾರಗಳನ್ನು ಕೇಳುವುದರಿಂದ ಮಾನಸಿಕ ನೆಮ್ಮದಿ ಶಾಂತಿ ಸುಖ ಹಾಗೂ ಮುಕ್ತಿಯನ್ನು ಪಡೆಯಲು ಇಂತಹ ಅಧ್ಯಾತ್ಮಿಕ ಚಿಂತನೆಗಳ ಮೂಲಕ ಚಂಚಲವಾದ ಮನಸು ಒಳ್ಳೆಯ ಗುಣಗಳು ವಿಚಾರಗಳನ್ನು ಮಾನವನು ಅಳವಡಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು ಮತ್ತು ಸುಕ್ಷೇತ್ರ ಶ್ರೀ ಬೋಡಬಂಡ್ ಗ್ರಾಮ ದಲ್ಲಿ ಶ್ರೀ ಲಕ್ಷ್ಮೀ ತಿಮ್ಮಪ್ಪ ಸ್ವಾಮಿ ದೇವಸ್ಥಾನ ಬಡಜನರಿಗೆ ಇ ಕ್ಷೇತ್ರ ಸಾಕ್ಷಾತ್ ಶ್ರೀ ತಿರುಮಲ ತಿರುಪತಿ ತಿಮ್ಮಪ್ಪನೇ ಸುಕ್ಷೇತ್ರ ಶ್ರೀ ಬೋಡಬಂಡ್ ಬೆಟ್ಟದ ಮೇಲೆ ನೆಲೆ ನಿಂತು ಪ್ರತಿ ದಿನಾಲು ನೆನೆದವರ ಮನದಲ್ಲಿ ಸ್ಥಿರವಾಗಿ ನಿಂತು ಜನರ ಕಷ್ಟಸುಖ ಗಳನ್ನು ನೀಗಿಸುವದರ ಜೋತೆಗೆ ಸುಖ ಶಾಂತಿ ನೆಮ್ಮದಿ ನೀಡಲು ಸಾಕ್ಷಾತ್ ಶ್ರೀ ತಿರುಮಲ ತಿರುಪತಿ ಲಕ್ಷ್ಮೀ ತಿಮ್ಮಪ್ಪ ಸ್ವಾಮಿ ನೆಲೆಸಿರುವ ನೆಂದು ಹೆಳಿದರು. ಸುಕ್ಷೇತ್ರ ಶ್ರೀ ಬೋಡಬಂಡ್ ಗ್ರಾಮ ದಲ್ಲಿ ರುವ ಶ್ರೀ ಲಕ್ಷ್ಮೀ ತಿಮ್ಮಪ್ಪ ಸ್ವಾಮಿ ದೇವಸ್ಥಾನ ಪುಣ್ಯ ಪವಿತ್ರ ಕ್ಷೇತ್ರ ವಾಗಿದ್ದು ಇದರ ಜೀರ್ಣೋದ್ಧಾರ ಕ್ಕಾಗಿ ಉದ್ಯಮಿ ಶ್ರೀ ನರೇಂದ್ರ ರಾಠೋಡ್ ಹಗಲಿರುಳು ಶ್ರಮಿಸುತ್ತಿದ್ದಾರೆ ಅವರ ಸೇವೆಯು ಶ್ಲಾಘನೀಯವಾದುದು.ಉತ್ತಮವಾದ ವಾತಾವರಣ ವಿದೆ ಬಂಜಾರ ಸಮಾಜದ ಕಲ್ಯಾಣ ಕ್ಕಾಗಿ ನಾನು ಅನುದಾನ ಬಿಡುಗಡೆ ಗೊಳಿಸಿ ನಾನು ಒತ್ತು ನೀಡುತ್ತೆನೆ ಎಂದರು. ಪೂಜೆ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಖಾಸಮಠ ಗುರುಮಠಕಲ್ ದಿವ್ಯ ಸಾನಿಧ್ಯ ವಹಿಸಿ.ಹರಗುರು ಗಣ್ಯರು ಮುಖಂಡರು ಭಕ್ತರ ಸಮ್ಮುಖದಲ್ಲಿ ಜ್ಯೋತಿ ಬೆಳಗಿ ಸುವ ಮೂಲಕ ಧಾರ್ಮಿಕ ಸಭೆ ಗೆ ಚಾಲನೆ ನೀಡಿದರು. ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ನೆರಡಗುಂಬ ಮತ್ತು ಬೋಡಬಂಡಾ ಆರ್ಶಿವಚನ ನೀಡಿ ದರು.ಧರ್ಮಗುರುಗಳು ಇ ಸಂದರ್ಭದಲ್ಲಿ ಆರ್ಶಿವಚನ ನೀಡಿ ದರು. ಕಾರ್ಯಕ್ರಮದಲ್ಲಿ ಚಿತ್ತಾಪೂರ ಯಲ್ಲಾಲಿಂಗ ಪೂಣ್ಯಶ್ರಮ ಮಹಾನಗರ ತಾಂಡಾ ಶ್ರೀ ಜೇಮ್ ಸಿಂಗ್ ಮಹಾರಾಜರು. ಸೇವಾಲಾಲ್ ಸಂಸ್ಥಾನ ಮಠ ಶ್ರೀ ಶಕ್ತಿ ಪೀಠ ಪೌರದೇವಿ ಶಾಖೆ ಬಳೀರಾಮ್ ಮಹಾರಾಜರು. ಮುಖ್ಯ ಅತಿಥಿಗಳಾಗಿ ಅಧ್ಯಕ್ಷ ರು ಗ್ರಾಮ ಪಂಚಾಯಿತಿ ಕಾಕಲವಾರ ಶ್ರೀ ಮತಿ ಭಾಗ್ಯ ಮ್ಮ ಸತೀಶ್. ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವುಂಟಿ. ಎಐಬಿಎಸ್ ಎಸ್ ಅಧ್ಯಕ್ಷ ರು ಕಾಶಿನಾಥ್ ಆರ್ ರಾಠೋಡ್ ಹಾಗೂ ಸಮಸ್ತ ಬೋರಬಂಡ ಗ್ರಾಮಸ್ಥರು ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಂಘ ವ್ಯವಸ್ಥಾಪಕರು ಶ್ರೀ ನರೇಂದ್ರ ರಾಠೋಡ್. ಸುತ್ತಮುತ್ತಲಿನ ಗ್ರಾಮಗಳ ಜನರು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಿ ಕೊಂಡು ದೇವರ ಕೃಪೆಗೆ ಪಾತ್ರರಾದರು.